ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಯುಗಕ್ಕೆ ನಾಂದಿ ಹಾಡಿದ ಚಿತ್ರಗಳಲ್ಲಿ ಉಳಿದವರು ಕಂಡಂತೆ ಕೂಡಾ ಒಂದು ಚಿತ್ರವಾಗಿದೆ. ಚಾಲ್ತಿಯಲ್ಲಿದ್ದ ಸಿನಿಮಾ ತಯಾರಿಕೆಯ ಪಟ್ಟುಗಳನ್ನು ಬಿಟ್ಟು ಸಂಪೂರ್ಣವಾಗಿ ಹೊಸದಾದ ರೀತಿಯಲ್ಲಿ ಉಳಿದವರು ಕಂಡಂತೆ ತೆರೆಕಂಡಿತ್ತು. ಆರಂಭದಲ್ಲಿ ಉಳಿದವರು ಕಂಡಂತೆ ಜನರನ್ನು ರಂಜಿಸುವ ಬದಲಿಗೆ ಗೊಂದಲವನ್ನುಂಟು ಮಾಡಿದಂತೆ ಕಂಡರೂ ನಿಧಾನವಾಗಿ ಜನರಿಗೆ ಕಥೆಯ ಹಂದರ ಅರ್ಥವಾಗ ತೊಡಗಿತ್ತು. ಉಳಿದವರು ಕಂಡಂತೆಯ ಮೂಲಕ ಉದಯೋನ್ಮುಖ ನಟ ಮತ್ತು ದೂರದರ್ಶಿ ನಿರ್ದೇಶಕನೊಬ್ಬನು ಕನ್ನಡ ಚಿತ್ರರಂಗಕ್ಕೆ ದೊರೆತದ್ದು ಈಗ ಇತಿಹಾಸ.
ಉಳಿದವರು ಕಂಡಂತೆ 9 ವರ್ಷಗಳನ್ನು ಪೂರೈಸಿದ್ದು ಈ ಬಗ್ಗೆ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಉಳಿದವರು ಕಂಡಂತೆ ಕಥೆ ಹೇಳುವ ಕಲೆಯ ಮೂಲಕ ಹೆಚ್ಚು ಪರಿಚಯವಿಲ್ಲದ ಅನೇಕ ವಿಷಯಗಳನ್ನು ಮುನ್ನೆಲೆಗೆ ತರುವ ಪ್ರಾಮಾಣಿಕ ಪ್ರಯತ್ನವಾಗಿತ್ತು. ಇದು ವೈಶಿಷ್ಟ್ಯವನ್ನು ನಿರ್ದೇಶಿಸುವ ನನ್ನ ಮೊದಲ ಪ್ರಯತ್ನವಾಗಿತ್ತು. ಎಲ್ಲವನ್ನೂ ಮೀರಿದ ನನ್ನ ಕನಸು ಬಿಡುಗಡೆಯಾಗಿ ಇಂದಿಗೆ 9 ವರ್ಷಗಳು ತುಂಬಿವೆ ಮತ್ತು ಈ ಎಲ್ಲಾ ವರ್ಷಗಳಲ್ಲಿ ನೀವು ಉಳಿದವರು ಕಂಡಂತೆಯನ್ನು ಸ್ಥಿರವಾಗಿ ಗುರುತಿಸಿದ್ದೀರಿ ಮತ್ತು ಕೊನೆಯಿಲ್ಲದ ಪ್ರೀತಿಯನ್ನು ಸುರಿಸಿದ್ದೀರಿ. ನಾನು ಭಾವಪರವಶನಾಗಿದ್ದೇನೆ. ನಾನು ಕೃತಜ್ಞನಾಗಿದ್ದೇನೆ ಮತ್ತು ವಿನಮ್ರನಾಗಿದ್ದೇನೆ. ನಿಮ್ಮ ರಿಚಿ ಶೀಘ್ರದಲ್ಲೇ ಹಿಂತಿರುಗುತ್ತಾನೆ ಎಂದು ಕಿರಿಕ್ ಹುಡುಗ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ರಿಚರ್ಡ್ ಆಂಟನಿ, ಉಳಿದವರು ಕಂಡಂತೆ ಚಿತ್ರದ ಮುಂದುವರಿದ ಭಾಗವಾಗಲಿದೆ.