ಉಡುಪಿ, ಜೂನ್ 15: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಸ್ತವ್ಯ, ವಾಣಿಜ್ಯ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲೀಕರು, ಅನುಭೋಗದಾರರು 2019-20 ನೇ ಸಾಲಿನ ಆಸ್ತಿ ತೆರಿಗೆ ದಂಡ ರಹಿತವಾಗಿ ಪಾವತಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ.
2019-20 ನೇ ಸಾಲಿನ ತೆರಿಗೆ ಪಾವತಿಸದೇ ಬಾಕಿ ಇರುವವರು ದಂಡನೆ ಸಮೇತ ತೆರಿಗೆ ಪಾವತಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.