ಉಡುಪಿ: ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆಯು ಜೂ. 14 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್
ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್ ವಹಿಸಿದ್ದರು.
ನರೇಗಾ ಯೋಜನೆಯಡಿ ಬಾವಿ ನಿರ್ಮಾಣಕ್ಕೆ ಐವತ್ತು ಸೆಂಟ್ಸ್ ಗಿಂತ ಹೆಚ್ಚು ವಿಸ್ತೀರ್ಣದ
ಜಾಗ ಅವಶ್ಯಕ ವಿದ್ದು 50 ಸೆಂಟ್ಸ್ ಕಡಿಮೆ ಜಾಗ ಇರುವವರಿಗೂ ಕೂಡ ನರೇಗಾ ಯೋಜನೆಯಡಿ ಬಾವಿ ನಿರ್ಮಿಸುವ ಬಗ್ಗೆ ಸಾರ್ವಜನಿಕರಿಂದ ಮನವಿಗಳು ಬರುತ್ತಿದ್ದು ಈ ಬಗ್ಗೆ ಜಿಲ್ಲಾ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಪ್ರಸ್ಥಾಪಿಸುವುದಾಗಿ ಶಾಸಕರು ತಿಳಿಸಿದರು.
ನೀಲಾವರ, ಬಾರ್ಕೂರು, ಉಗ್ಗೆಲ್ ಬೆಟ್ಟು ಕಿಂಡಿ ಅಣೆಕಟ್ಟಿಗೆ ಈ ಬಾರಿ ಸರಿಯಾದ
ರೀತಿಯಲ್ಲಿ ಹಲಗೆಗಳನ್ನು ಹಾಕದೆ ಕಿಂಡಿ ಅಣೆಕಟ್ಟಿಗೆ ಉಪ್ಪು ನೀರು ಹರಿದು ಈ ಬಾರಿ
ತುಂಬಾ ತೊಂದರೆ ಉಂಟಾಗಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ
ತೆಗೆದುಕೊಳ್ಳುವಂತೆ ಮಾನ್ಯ ಶಾಸಕರು ಸಣ್ಣ ನೀರಾವರಿ ಇಲಾಖೆಯ ಮೇಲಾಧಿಕಾರಿಗಳಿಗೆ
ಸೂಚಿಸಿದರು.
ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ಫಲಾನುಭವಿಗಳಿಗೆ ಸಂಬಂಧಪಟ್ಟ ಇಲಾಖೆಯವರು ಸರಿಯಾದ ಮಾಹಿತಿಯನ್ನು ನೀಡುವಂತೆ ಶಾಸಕರು ಸಭೆಯಲ್ಲಿ ತಿಳಿಸಿದರು
ವಿಕಲಚೇತನರಿಗೆ ಬಸ್ ಪಾಸ್ ಮಾಡಿಸಲು ಮಂಗಳೂರಿಗೆ ಹೋಗಬೇಕಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯರು ತಿಳಿಸಿದಾಗ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ
ಮಾತನಾಡುವುದಾಗಿ ಮಾನ್ಯ ಶಾಸಕರು ಸಭೆಯಲ್ಲಿ ತಿಳಿಸಿದರು
ತಾಲ್ಲೂಕು ಪಂಚಾಯಿತ್ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ
ಹೊಂದಿದ ಎಸ್ ಹರಿಕೃಷ್ಣ ಶಿವತ್ತಾಯ ಇವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.ಸಭೆಯಲ್ಲಿ ಉಡುಪಿ ವಿಧಾನ ಸಭಾ ಸದಸ್ಯರಾದ ಕೆ ರಘುಪತಿಭಟ್ ಉಪಸ್ಥಿತರಿದ್ದರು ಹಾಗೂ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ರಾಜೇಂದ್ರ ಪಂದುಬೆಟ್ಟು ಮತ್ತು ತಾಲೂಕು ಪಂಚಾಯತ್ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.