ಯರ್ಲಪಾಡಿ: ಶ್ರೀ ಆದಿಶಕ್ತಿ ಕಾಳಿಕಾಂಬ ಭಜನಾ ಮಂಡಳಿ ಕೆಳಗಿನ ಮನೆ ಯರ್ಲಪಾಡಿ ಇದರ 15ನೇ ವರ್ಷದ ಭಜನಾ ಮಂಗಲೋತ್ಸವ ಹಾಗೂ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ಮತ್ತು ಕೆಳಗಿನಮನೆ ಕುಟುಂಬದ ಧರ್ಮದೈವಗಳ ನೇಮೋತ್ಸವವು ಫೆ.18 ರಿಂದ 20 ರವರೆಗೆ ಕೆಳಗಿನಮನೆ, ಯರ್ಲಪಾಡಿಯಲ್ಲಿ ನಡೆಯಲಿದೆ.
ಫೆ. 18ರಂದು ಸಂಜೆ 6.00 ರಿಂದ ಫೆ. 19ರ ಬೆಳಿಗ್ಗೆ 6.00 ರವರೆಗೆ 15ನೇ ವರ್ಷದ ಭಜನಾ ಮಂಗಲೋತ್ಸವ, ಫೆ.19 ರಂದು ರಾತ್ರಿ 07 ರಿಂದ 09 ರವರೆಗೆ ಮರುಭಜನೆ ಹಾಗೂ ಫೆ.20 ರಂದು ಸಂಜೆ 06 ರಿಂದ ಕೆಳಗಿನಮನೆ ಕುಟುಂಬದ ಧರ್ಮದೈವಗಳ ಸಿರಿ ಸಿಂಗಾರದ ನೇಮೋತ್ಸವ ಜರಗಲಿರುವುದು.
ಆ ಪ್ರಯುಕ್ತ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಸಿರಿಮುಡಿ, ಗಂಧ ಪ್ರಸಾದವನ್ನು ಸ್ವೀಕರಿಸಿ ತನು, ಮನ, ಧನಗಳಿಂದ ಸಹಕರಿಸಿ ಶ್ರೀದೇವಿ ಹಾಗೂ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀಮತಿ ಮತ್ತು ಶ್ರೀ ರಾಮ ಆಚಾರ್ಯ ಮತ್ತು ಕುಟುಂಬಸ್ಥರು, ಕೆಳಗಿನ ಮನೆ, ಯರ್ಲಪಾಡಿ ಶ್ರೀ ಆದಿಶಕ್ತಿ ಕಾಳಿಕಾಂಬಾ ಭಜನಾ ಮಂಡಳಿ ಹಾಗೂ ಊರ ಪರವೂರ ಭಕ್ತಾಭಿಮಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಆದಿಶಕ್ತಿ ಕಾಳಿಕಾಂಬ ಭಜನಾ ಮಂಡಳಿ ಕೆಳಗಿನ ಮನೆ, ಯರ್ಲಪಾಡಿ ಇದರ 15ನೇ ವರ್ಷದ ಭಜನಾ ಮಂಗಲೋತ್ಸವದ ಪ್ರಯುಕ್ತ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ಫೆ.18 ರಂದು ಬೆಳಿಗ್ಗೆ 9.00 ಕ್ಕೆ ನಡೆಯಲಿದ್ದು, ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಾಮ ಆಚಾರ್ಯ ಯಜಮಾನರು, ಕೆಳಗಿನಮನೆ, ಯರ್ಲಪಾಡಿ ಇವರು ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟಕರು: ವಿಕ್ರಂ ಹೆಗ್ಡೆ, ಭೂನ್ಯಾಯ ಮಂಡಳಿ ಸದಸ್ಯರು, ಕಾರ್ಕಳ
ಮುಖ್ಯ ಅತಿಥಿಗಳು: ವಿದ್ಯಾನಂದ ಮುದ್ಯ, ಕುಕ್ಕುಡೆಗುತ್ತು ಮನೆ, ಯರ್ಲಪಾಡಿ
ಶಂಕರ್ ಆಚಾರ್ಯ, ದೇವಿಪಾತ್ರಿ, ಕೆಳಗಿನಮನೆ, ಯರ್ಲಪಾಡಿ
ಶೇಖರ ಪೂಜಾರಿ, ನಡಿಬೆಟ್ಟು, ಬರ್ಕೆಮನೆ, ಯರ್ಲಪಾಡಿ
ನಾಥು ಪೂಜಾರಿ, ಗೌರವಾಧ್ಯಕ್ಷರು ಶ್ರೀ ಆದಿಶಕ್ತಿ ಕಾಳಿಕಾಂಬಾ ಭಜನಾ ಮಂಡಳಿ, ಕೆಳಗಿನಮನೆ ಉದಯ ಕುಮಾರ್ ಹೆಗ್ಡೆ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಯರ್ಲಪಾಡಿ
ಧರ್ಮರಾಜ್ ಕುಮಾರ್ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್, ಯರ್ಲಪಾಡಿ ಶಶಿಕಾಂತ್ ಶೆಟ್ಟಿ, ಯರ್ಲಪಾಡಿ ಸಾಯಿ ಕನ್ ಸ್ಟ್ರಕ್ಷನ್, ಉಡುಪಿ.
ಸಮಾರೋಪ ಸಮಾರಂಭ ಮಧ್ಯಾಹ್ನ ಗಂಟೆ 1.00ರಿಂದ
ಅಧ್ಯಕ್ಷತೆ: ಶ್ರೀಮತಿ ಪ್ರಮೀಳಾ ಪೂಜಾರ್ತಿ
ಅಧ್ಯಕ್ಷರು, ಗ್ರಾಮ ಪಂಚಾಯತ್ ಯರ್ಲಪಾಡಿ
ಮುಖ್ಯ ಅತಿಥಿಗಳು: ಅನಂತ ಪಟ್ಟಾಭಿರಾಮ್ ಆಡಳಿತ ಮೊಕ್ತೇಸರರು, ಕರ್ವಾಲು ಗೋವಿಂದೂರು
ಶ್ರೀಮತಿ ಸೌಮ್ಯ ಶೆಟ್ಟಿ, ಮೇಲ್ವಿಚಾರಕರು ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಬೈಲೂರು ವಲಯ
ಶಂಕರ್ ಶೆಟ್ಟಿ ಪೊಸಮಾರು ಮನೆ, ಯರ್ಲಪಾಡಿ
ಸುರೇಂದ್ರ ಶೆಟ್ಟಿ, ಅಧ್ಯಕ್ಷರು, ಹಳೆವಿದ್ಯಾರ್ಥಿ ಸಂಘ ಸರಕಾರಿ ಸಂಯುಕ್ತ ಪ್ರೌಢ ಶಾಲೆ, ಯರ್ಲಪಾಡಿ
ಸುನಿಲ್ ಶೆಟ್ಟಿ, ಉಪಾಧ್ಯಕ್ಷರು, ಗ್ರಾ.ಪಂ.ಯರ್ಲಪಾಡಿ
ಸಂತೋಷ್ ಅಮೀನ್, ಗೋವಿಂದೂರು ಪಿಡಬ್ಲ್ಯೂಡಿ ಕ್ಲಾಸ್ I ಗುತ್ತಿಗೆದಾರರು ಪ್ರವೀಣ್ ಆಚಾರ್ಯ, ಪುರೋಹಿತರು
ದಿನೇಶ್ ಆಚಾರ್ಯ, ಅಧ್ಯಕ್ಷರು ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.), ಬೈಲೂರು
ಪ್ರಜ್ವಲ್ ಶೆಟ್ಟಿ, ಅಧ್ಯಕ್ಷರು ಶ್ರೀ ಆದಿಶಕ್ತಿ ಕಾಳಿಕಾಂಬಾ ಭಜನಾ ಮಂಡಳಿ ಮುಂತಾದವರು ಉಪಸ್ಥಿತರಿರಲಿದ್ದಾರೆ.