ಮಂಗಳೂರು: ತಮ್ಮ ಮುಂಬರುವ ಜೈಲರ್ ಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ಚಿತ್ರರಂಗದ ದಿಗ್ಗಜ ನಟರಾದ ರಜನಿಕಾಂತ್ ಹಾಗೂ ಶಿವರಾಜ್ ಕುಮಾರ್ ನಗರದ ಪ್ರತಿಷ್ಠಿತ ಎ.ಜೆ. ಗ್ರ್ಯಾಂಡ್ ಹೋಟೇಲಿನಲ್ಲಿ ವಾಸ್ತವ್ಯ ಹೂಡಿದ್ದರು. ಹೋಟೇಲಿನ ವ್ಯವಸ್ಥಾಪಕ ನಿರ್ದೇಶಕ ಎ.ಜೆ.ಶೆಟ್ಟಿ ಹಾಗೂ ಉಪನಿರ್ದೇಶಕ ಪ್ರಶಾಂತ್ ಶೆಟ್ಟಿ ನಟರನ್ನು ಬರಮಾಡಿಕೊಂಡರು.
ಜೈಲರ್ ಚಿತ್ರದ ಚಿತ್ರೀಕರಣವು ಮಂಗಳೂರಿನ ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದ್ದು, ಈ ಸಂದರ್ಭ ಸಾಧು ಕೋಕಿಲ, ಯೋಗಿ ಬಾಬು ಮುಂತಾದ ನಟರು ಜಿಲ್ಲೆಗೆ ಆಗಮಿಸಿದ್ದು, ಹೋಟೇಲ್ ನಲ್ಲಿ ತಂಗಿದ್ದಾರೆ ಮತ್ತು ಇಲ್ಲಿನ ಗುಟಮಟ್ಟದ ಸೇವೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.