ಕುಂದಾಪುರ ಬಸ್ ಗಳು ಹೆಬ್ರಿ ಪ್ರಥಮ ದರ್ಜೆ ಕಾಲೇಜು ರಸ್ತೆಯಾಗಿ ಬರುವಂತೆ ಸೂಚನೆ

ಉಡುಪಿ: ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ನಿರ್ಣಯದಂತೆ ಕುಂದಾಪುರ ಹಾಗೂ ಬ್ರಹ್ಮಾವರದಿಂದ ಆಗಮಿಸುವ ಎಲ್ಲಾ ಬಸ್ಸುಗಳು ಹೆಬ್ರಿ ತಾಲೂಕಿನ ಹೆಬ್ರಿ ಪ್ರಥಮ ದರ್ಜೆ ಕಾಲೇಜು ರಸ್ತೆಗೆ ಬಂದು ಉಡುಪಿ ರಸ್ತೆಗೆ ಸಂಧಿಸಿ, ಹೆಬ್ರಿ ಪೇಟೆಗೆ ತೆರಳುವಂತೆ ಸಂಬಂಧಪಟ್ಟ ಬಸ್ಸು ಮಾಲೀಕರು ಕ್ರಮವಹಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.