ಉಡುಪಿ: ಬಹುನಿರೀಕ್ಷಿತ ಮಹಿಳಾ ಉದ್ಯಮಿಗಳ ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ “ಪವರ್ ಪರ್ಬ ” ವನ್ನು ನಿವೃತ್ತ ಜಿಲ್ಲಾಧಿಕಾರಿ ಕಲ್ಪನಾ ಗೋಪಾಲನ್ ಉದ್ಘಾಟಿಸಿದರು.
ಬೀಡಿನಗುಡ್ಡೆ ಮಹಾತ್ಮಾ ಗಾಂಧಿ ಬಯಲು ರಂಗ ಮಂದಿರದಲ್ಲಿ ಮಾರಾಟ ಮಳಿಗೆಗಳನ್ನು ಹಾಕಲಾಗಿದ್ದು ಇದರ ಉದ್ಘಾಟನೆಯನ್ನು ಶಾಸಕ ರಘುಪತಿ ಭಟ್ ನೆರವೇರಿಸಿದರು.
ಈ ಬೃಹತ್ ಮೇಳದಲ್ಲಿ 125ಕ್ಕೂ ಹೆಚ್ಚು ಉತ್ಪನ್ನಗಳ/ ಸೇವೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ . ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಲು ವಿಶಿಷ್ಟ ಆಹಾರ ಮಳಿಗೆಗಳು, ವಿಶೇಷ ಆಟದ ವಲಯಗಳ ಜೊತೆಗೆ ಬೇರೆ ಬೇರೆ ರೀತಿಯ ಸ್ಪರ್ಧೆಗಳು ಇರಲಿವೆ.
ಉದ್ಘಾಟನೆಯಲ್ಲಿ ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ, ಕಾರ್ಯದರ್ಶಿ ಅರ್ಚನಾ ರಾವ್, ಖಜಾಂಚಿ ಪ್ರತಿಭಾ ಆರ್. ವಿ, ಕಾರ್ಯಕ್ರಮ ಸಂಯೋಜಕಿ ಶಿಲ್ಪಾ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ದೀನಾ ಪ್ರಭಾಕರ್, ಜೊತೆ ಕಾರ್ಯದರ್ಶಿ ತೃಪ್ತಿ ನಾಯಕ್, ಪುಷ್ಪಾ ಗಣೇಶ್ ರಾವ್, ಸಂಸ್ಥಾಪಕ ಅಧ್ಯಕ್ಷೆ ರೇಣು ಜಯರಾಂ, ಎಂ ಎಸ್ ಎಂ ಇ ಸಹಾಯಕ ನಿರ್ದೇಶಕಿ ಶೃತಿ ಜಿ ಕೆ, ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕ ನಾಗರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ, ಯೂನಿಯನ್ ಬ್ಯಾಂಕ್ ಡಿಜಿಎಂ ವಾಸಪ್ಪ, ಎ ಪಿ ಆಚಾರ್ ಮುಂತಾದವರು ಉಪಸ್ಥಿತರಿದ್ದರು.