ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಹಾಗೂ ಉದ್ಯೋಗಾಧಾರಿತ ತರಬೇತಿಗಳಿಗೆ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಜನವರಿ 2023ರಿಂದ ಜನವರಿ 2024ರ ವರೆಗೆ ಪ್ರತಿ ತಿಂಗಳು ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ಗಳನ್ನು ಪ್ರಾರಂಭಿಸಿದೆ. ಈ ಮೂಲಕ ಜಿಲ್ಲೆಯ ಹಾಗೂ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭವಿಷ್ಯ ನಿರ್ಮಿಸಲು ಇದೊಂದು ಉತ್ತಮ ಅವಕಾಶ ಕಲ್ಪಿಸಿಕೊಡಲಿದೆ” ಎಂದು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದರು.
ವರ್ಷವಿಡೀ ನಡೆಯುವ ಈ ಕಾರ್ಯಕ್ರಮದ ಮೊದಲ ಮೇಳಕ್ಕೆ ಇಂದು ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯ ಕ್ಯಾಂಪಸ್ ನಲ್ಲಿ ಚಾಲನೆ ನೀಡಲಾಯಿತು. ಈ ಮೇಳದಲ್ಲಿ ಜಿಲ್ಲೆಯ ಹಾಗೂ ಬೆಂಗಳೂರಿನ ಸುಮಾರು 18 ಕಂಪೆನಿಗಳು ಭಾಗವಹಿಸಿ ನೂರಾರು ಅಭ್ಯರ್ಥಿಗಳು ನೇರ ಹಾಗೂ ಆನ್ ಲೈನ್ ಸಂದರ್ಶನದ ಮೂಲಕ ಭಾಗವಹಿಸಿದರು. ವಿನ್ ಮ್ಯಾನ್ ಸಾಫ್ಟ್ ವೇರ್, ಕೋಜೆಂಟ್, ಇನ್ನೋವಾಸೋರ್ಸ್ ಸರ್ವೀಸಸ್, ಪ್ರಕಾಶ್ ರೀಟೇಲ್ಸ್, ಮ್ಯಾಟ್ರಿಕ್ಸ್ ಆಟೋ ವೆಂಚರ್ಸ್, ಓಮ್ನಿಯನ್ ಪ್ರೀ ಮೀಡಿಯಾ ಪ್ರೈ ಲಿ, ದೇಸಿ ಕ್ರಿವ್ ಸರ್ವೀಸಸ್, ಎ ಬಿ ಎಫ್ ಗ್ರೂಪ್ ಆಫ್ ಕಂಪೆನೀಸ್, ಹೋಟೆಲ್ ಟ್ರಾಂಕ್ವಿಲ್, ಕೋಟಕ್ ಲೈಫ್ ಇನ್ಸೂರೆರ್ನ್ಸ್, ಆಪ್ಸನ್ ಓರಥೋ, ಬಿ ಎಸ್ ಎಲ್ ಇಂಡಿಯಾ ಪ್ರೈ ಲಿ, ಕಿಡ್ಸಜೀ ಹೀಗೆ ಐಟಿ, ಬ್ಯಾಂಕಿಂಗ್, ಆಟೋಮೊಬೈಲ್, ರೀಟೆಲ್, ಹಾಸ್ಪಿಟಲಿಟಿ, ಬಿಪಿಒ, ಮ್ಯಾನುಫಾಕ್ಚರಿಂಗ್, ಎಜುಕೇಶನ್ ಹೀಗೆ ವಿವಿಧ ಕ್ಷೇತ್ರಗಳ ಹತ್ತಾರು ಕಂಪೆನಿಗಳು ಭಾಗವಹಿಸಿದ್ದವು.
ಈ ಮೇಳವು ಪ್ರತಿ ತಿಂಗಳ ಎರಡನೇ ಗುರುವಾರದಂದು ಸಂಸ್ಥೆಯ ಕಚೇರಿಯಲ್ಲಿ ನೇರ ಸಂದರ್ಶನ ಅಥವಾ ಆನ್ ಲೈನ್ ಸಂದರ್ಶನದ ಮೂಲಕ ಮುಂದುವರಿಯಲಿದೆ. ಆಸಕ್ತ ಅಭ್ಯರ್ಥಿಗಳು ಅಥವಾ ಉದ್ಯೋಗದಾತರು www.unnathijobs.com ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ರಾಜೇಶ್, ದೀಪಿಕಾ, ಛಾಯಾ, ಕಾರ್ತಿಕ್, ಪೂರ್ಣೆಶ್ ಉಪಸ್ಥಿತರಿದ್ದರು.