ಉಡುಪಿ: ಇಲ್ಲಿನ ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಬಯಲು ರಂಗಮಂದಿರದಲ್ಲಿ ಮಹಿಳಾ ಉದ್ಯಮಿಗಳಿಂದಲೇ ನಡೆಸಲ್ಪಡುವ ಪವರ್ ಪರ್ಬದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಜ.14-15 ರಂದು ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಆಸಕ್ತರು ಭಾಗವಹಿಸಿ ನಗದು ಬಹುಮಾನಗಳನ್ನು ಗೆಲ್ಲಬಹುದು.
ಜ.14 ಸಮೂಹ ನೃತ್ಯ ಸ್ಪರ್ಧೆ ಸಮಯ ಸಂಜೆ 6 ಗಂಟೆ
ನಿಯಮಗಳು
# ಎಲ್ಲಾ ವಯಸ್ಸಿನವರಿಗೂ ಮುಕ್ತ ಅವಕಾಶ
# ಒಂದು ತಂಡದಲ್ಲಿ ಕನಿಷ್ಟ 4 ಮತ್ತು ಗರಿಷ್ಟ 10 ಜನರಿರಬೇಕು
# ಯಾವುದೇ ನೃತ್ಯ ಪ್ರಕಾರವನ್ನು ಆಯ್ದುಕೊಳ್ಳಬಹುದು
# ತೀರ್ಪುಗಾರರ ನಿರ್ಣಯವೇ ಅಂತಿಮ
ಜ.14 ಸಾರಿ ಬಾರ್ಡರ್ ರಂಗೋಲಿ ಸ್ಪರ್ಧೆ ಸಮಯ ಬೆಳಿಗ್ಗೆ 10.30 ಗಂಟೆ
ನಿಯಮಗಳು
# ರಂಗೋಲಿ ಬಣ್ಣಗಳನ್ನು ಬಳಸಿ ಸೀರೆಯ ಬಾರ್ಡರ್ ಬಿಡಿಸುವುದು
# ಒಂದು ತಂಡದಲ್ಲಿ ಇಬ್ಬರಿಗೆ ಮಾತ್ರ ಅವಕಾಶ
# ಒಬ್ಬರು ಸೀರೆಯನ್ನು ಉಟ್ಟು ಪ್ರದರ್ಶಿಸಬೇಕು
# ಯಾವುದೇ ಮಾದರಿಯ ಸೀರೆಯನ್ನು ಬಳಸಬಹುದು
# ಒಂದು ಗಂಟೆ ಕಾಲಾವಕಾಶ
# ಸ್ಪರ್ಧಿಯು 18 ವರ್ಷ ಮೇಲ್ಪಟ್ಟಿರಬೇಕು
# ರಂಗೋಲಿ ಬಣ್ಣಗಳನ್ನು ತಾವೇ ತರಬೇಕು
#ತೀರ್ಪುಗಾರರ ನಿರ್ಣಯವೇ ಅಂತಿಮ
# ನೋಂದಣಿ ಶುಲ್ಕ 100/-ರೂ ಮೊದಲ 25 ನೋಂದಣಿಗಳಿಗಷ್ಟೆ ಅವಕಾಶ
ಜ.15 ರಂದು ಚಿತ್ರಕಲಾ ಸ್ಪರ್ಧೆ: ಸಮಯ 10 ಗಂಟೆ
ನಿಯಮಗಳು
ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು
ಒಂದು ಗಂಟೆ ಕಾಲಾವಕಾಶ
ಚಿತ್ರಕಲೆಗೆ ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು
ಡ್ರಾಯಿಂಗ್ ಶೀಟ್ಗಳನ್ನು ಒದಗಿಸಲಾಗುವುದು
1 ರಿಂದ 8 ನೆ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ
ತೀರ್ಪುಗಾರರ ನಿರ್ಣಯವೇ ಅಂತಿಮ
ಗ್ರೂಪ್1- 1 ರಿಂದ 2 ನೇ ತರಗತಿ
ಗ್ರೂಪ್2-3 ರಿಂದ 5 ನೇ ತರಗತಿ
ಗ್ರೂಪ್3- 6 ರಿಂದ 8 ನೇ ತರಗತಿ
ಸ್ಥಳದಲ್ಲೇ ನೋಂದಣಿ ಹಾಗೂ ವಿದ್ಯಾರ್ಥಿಗಳು ಶಾಲಾ ಐಡಿ ಕಾರ್ಡ್ ತರತಕ್ಕದ್ದು
ನೋಂದಣಿಗಾಗಿ ಸಂಪರ್ಕಿಸಿ: 9980550400/8197141495/7975130601