ಜೆಸಿಐ ಪರ್ಕಳ ಅಧ್ಯಕ್ಷರಾಗಿ ಸ್ವರಾಜ್ ಶೆಟ್ಟಿ ಪರ್ಕಳ ಆಯ್ಕೆ

ಪರ್ಕಳ: ಭಾರತದ ಪ್ರತಿಷ್ಠಿತ ಘಟಕವಾದ ಜೆಸಿಐ ಪರ್ಕಳ ಇದರ 2023ನೇ ಸಾಲಿನ ಅಧ್ಯಕ್ಷರಾಗಿ ಜೆಸಿ ಸ್ವರಾಜ್ ಶೆಟ್ಟಿ ಪರ್ಕಳ ಆಯ್ಕೆಯಾಗಿದ್ದಾರೆ ಹಾಗೂ ಕಾರ್ಯದರ್ಶಿಯಾಗಿ ಜೆಸಿ ಸಂಯುಕ್ತ ಬಿ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷರಾಗಿ ಜೆಜೆಸಿ ಸ್ಮರಣ್ ದೇವಾಡಿಗ ಆಯ್ಕೆಗೊಂಡಿದ್ದಾರೆ.

2023ನೇ ಘಟಕಾಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷರಾಗಿ ಜೆಸಿ ಉಷಾ ಕಲ್ಮಾಡಿ, ಉಪಾಧ್ಯಕ್ಷರಾಗಿ ಭರತ್ ಕುಲಾಲ್ , ಜಯಂತ್ ಜೋಗಿ ,ಜಶ್ವಂತ್ ಜೋಗಿ,ರಮ್ಯ ನಾಯಕ್, ಸಾಕ್ಷಿ, ಕೋಶಾಧಿಕಾರಿಯಾಗಿ ಶಾಂತಿ ಪ್ರಸಾದ್ ಶೆಟ್ಟಿ , ಜೊತೆ ಕಾರ್ಯದರ್ಶಿಯಾಗಿ ಬಾಬು, ಮಹಿಳಾ ಘಟಕದ ಸಂಯೋಜಕರಾಗಿ ಹರ್ಷಿತಾ ರೈ, ಜೂನಿಯರ್ ಜೇಸಿ ಸಂಯೋಜಕರಾಗಿ ಅಶ್ವಥ್ ಇವರು ಆಯ್ಕೆಯಾಗಿದ್ದಾರೆ.

ಘಟಕದ ಪದಗ್ರಹಣವು ಜ.8 ಆದಿತ್ಯವಾರ ಸಂಜೆ 6.30ಕ್ಕೆ ಪರ್ಕಳದ ಹೋಟೆಲ್ ಸಂಧ್ಯಾ ಇದರ ಮಾಧವಕೃಪಾ ಸಭಾಂಗಣದಲ್ಲಿ ನಡೆಯಲಿದೆ ಎಂದು ನಿಕಟಪೂರ್ವ ಅಧ್ಯಕ್ಷೆ ಉಷಾ ಕಲ್ಮಾಡಿ ಹಾಗೂ ನಿಯೋಜಿತ ಅಧ್ಯಕ್ಷ ಸ್ವರಾಜ್ ಶೆಟ್ಟಿ ಪರ್ಕಳ ತಿಳಿಸಿದ್ದಾರೆ.