ಉಡುಪಿ: ಮಣಿಪಾಲ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ
ನಿರುದ್ಯೋಗಿ ಸ್ವಉದ್ಯೋಗಾಕಾಂಕ್ಷಿಗಳಿಗಾಗಿ ಜೂನ್ 17ರಿಂದ ೩೦ ದಿನಗಳ ‘ಮೊಬೈಲ್
ರಿಪೇರಿ’, ೨೦ರಿಂದ ೪೫ ದಿನಗಳ ‘ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್
ವರ್ಕಿಂಗ್’ ಹಾಗೂ ೨೪ರಿಂದ ೧೦ ದಿನಗಳ ‘ಕೋಳಿ ಸಾಕಾಣಿಕೆ’ ತರಬೇತಿಯನ್ನು
ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ
ನೆಲೆಸಿರುವ ೧೮ ರಿಂದ ೪೫ ವರ್ಷದೊಳಗಿನ ನಿರುದ್ಯೋಗಿ ಯುವಕ–ಯುವತಿಯರು ಭಾಗವಹಿಸಬಹುದು. ತರಬೇತಿಯಲ್ಲಿ ಊಟ ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು, ತರಬೇತಿಯ ಜತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಖಾಲಿ ಹಾಳೆಯಲ್ಲಿ ತಮ್ಮ ಪೂರ್ಣ ವಿಳಾಸ, ಪಿನ್ಕೋಡ್, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ,
ಪಡೆಯಲಿಚ್ಚಿಸಿರುವ ತರಬೇತಿಯ ಹೆಸರು ಮುಂತಾದ ವಿಷಯಗಳನ್ನು ನಮೂದಿಸಿ ಜೂನ್ 13ರೊಳಗೆ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸಿಂಡಿಕೇಟ್ ಬ್ಯಾಂಕ್ ಪ್ರಧಾನ
ಕಚೇರಿ ಸಂಕೀರ್ಣ, ಮಣಿಪಾಲ– 576104 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ
ಮಾಹಿತಿಗೆ ಸಂಸ್ಥೆಯ ಮೊಬೈಲ್ ಸಂಖ್ಯೆ 9449862665 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.















