ಚಿಕನ್‌ಸಾಲ್ ಪ್ರವೇಶ ಹಾದಿಗೆ ತಡೆಬೇಲಿ: ಸಾರ್ವಜನಿಕ ಸಭೆ

ಕುಂದಾಪುರ: ಅಪಘಾತ ತಡೆಗೆ ನಗರಕ್ಕೆ ಸಂಪರ್ಕ ಕಲ್ಪಿಸುವ ಚಿಕನ್‌ಸಾಲ್ ರಸ್ತೆ ಪ್ರವೇಶ ಹಾದಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ಸಾವಜನಿಕರಿಂದ ತೀವ್ರ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಗುರುವಾರ ಸಂಗಮ್ ಪರಿಸರದ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಲಾಯಿತು. ಗುರುವಾರ ಸಂಜೆ ಇಲ್ಲಿನ ಶಶಿಧರ ಹೊಟೇಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ಬಿ.ಪಿ ದಿನೇಶ್ ಕುಮಾರ್, ಚಿಕನ್‌ಸಾಲ್ ರಸ್ತೆ ಪ್ರವೇಶ ಹಾದಿಗೆ ತಡೆಬೇಲಿ ಹಾಕಿದ್ದರಿಂದ ವಾಹನ ಸವಾರರು, ಸಾರ್ವಜನರಿಗಾಗುತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿವೆ. ಆನಗಳ್ಳಿಯಿಂದ ಕುಂದಾಪುರಕ್ಕೆ ಸಂಚರಿಸುವ ರಸ್ತೆಗೆ […]

ಶ್ರೀಕೃಷ್ಣ ಮಠದಲ್ಲಿ ಸುವರ್ಣ ಗೋಪುರಕ್ಕೆ ಸಹಸ್ರ ರಜತ ಕಲಶಾಭಿಷೇಕ

ಉಡುಪಿ:  ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ ಯೋಜನೆಯಾದ ಸುವರ್ಣಗೋಪುರ ಶಿಖರಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮವಾಗಿ ಅಷ್ಟಮಠಾದೀಶರು ಸುವರ್ಣ ಗೋಪುರಕ್ಕೆ ಸಹಸ್ರ ರಜತಕಲಶಾಭಿಷೇಕ ನಡೆಸಿದರು.

ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಪಲಿಮಾರು ಶ್ರೀ ಗಳಿಂದ ಗೌರವ ಸ್ವೀಕರಿಸಿದ ಯದುವೀರಕೃಷ್ಣದತ್ತ ಚಾಮರಾಜ ಒಡೆಯರು

ಉಡುಪಿ: ಶ್ರೀ ಕೃಷ್ಣ ಮಠಕ್ಕೆ ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ತರ ಯೋಜನೆಯಾದಸುವರ್ಣಗೋಪುರ ಶಿಖರಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದಲ್ಲಿಪಾಲ್ಗೊಳ್ಳಲು ಮೈಸೂರಿನ ಯದುವೀರಕೃಷ್ಣದತ್ತ ಚಾಮರಾಜ ಒಡೆಯರು ಮಠಕ್ಕೆ  ಆಗಮಿಸಿದಾಗ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಸನ್ಮಾನಿಸಿ ಅನುಗ್ರಹಿಸಿದರು.

ಸಿಂಡ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತ ತರಬೇತಿ: ಅರ್ಜಿ ಆಹ್ವಾನ

ಉಡುಪಿ: ಮಣಿಪಾಲ ಸಿಂಡ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದನಿರುದ್ಯೋಗಿ ಸ್ವಉದ್ಯೋಗಾಕಾಂಕ್ಷಿಗಳಿಗಾಗಿ ಜೂನ್‌ 17ರಿಂದ ೩೦ ದಿನಗಳ ‘ಮೊಬೈಲ್‌ರಿಪೇರಿ’, ೨೦ರಿಂದ ೪೫ ದಿನಗಳ ‘ಕಂಪ್ಯೂಟರ್‌ ಹಾರ್ಡ್‌ ವೇರ್‌ ಮತ್ತು ನೆಟ್‌ವರ್ಕಿಂಗ್‌’ ಹಾಗೂ ೨೪ರಿಂದ ೧೦ ದಿನಗಳ ‘ಕೋಳಿ ಸಾಕಾಣಿಕೆ’ ತರಬೇತಿಯನ್ನುಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿನೆಲೆಸಿರುವ ೧೮ ರಿಂದ ೪೫ ವರ್ಷದೊಳಗಿನ ನಿರುದ್ಯೋಗಿ ಯುವಕ–ಯುವತಿಯರು ಭಾಗವಹಿಸಬಹುದು. ತರಬೇತಿಯಲ್ಲಿ ಊಟ ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು, ತರಬೇತಿಯ ಜತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ […]

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ – ಅರ್ಜಿ ಆಹ್ವಾನ

ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 2019-20 ನೇ ಶೈಕ್ಷಣಿಕ ಸಾಲಿಗಾಗಿ ಒಂದನೇ ತರಗತಿಯಿಂದ ಅಂತಿಮ ಪದವಿ / ಡಿಪ್ಲೋಮಾ ಮತ್ತು ವೃತ್ತಿಪರ ಪದವಿವರೆಗೆ ಕರ್ನಾಟಕದಲ್ಲಿರುವ ಹಾಗೂ ಸರಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನ ಮಂಜೂರು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು, ಇಲ್ಲಿ ಜೂನ್ 10 […]