ವಕೀಲರು ದೇಶದ ಅಭಿವೃದ್ಧಿಯ ಆಧಾರ ಸ್ಥಂಭಗಳು

ಸ್ವತಂತ್ರ ಭಾರತದ ಪ್ರಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರವರ ಜನ್ಮ ದಿನ (1884ರ ಡಿ.3) ವನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ವಕೀಲರು ದೇಶದ ಅಭಿವೃದ್ಧಿಯ ಆಧಾರ ಸ್ಥಂಭಗಳು. ಜನತೆಗೆ ನ್ಯಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಸಮುದಾಯ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಕೀಲ ಸಮುದಾಯವು ನಂತರ ದಿನಗಳಲ್ಲಿ ವಹಿಸಿದ ವಕೀಲರ ಪ್ರಮುಖ ಪಾತ್ರ ಭಾರಿ ಹಿರಿತನದ್ದು.

ವಕೀಲ ವೃತ್ತಿ ಎನ್ನುವುದು ನೋಬೆಲ್ ಪ್ರೊಫೆಶನ್. ಏಕೆಂದರೆ ಪ್ರತಿಯೊಂದು ಸಿವಿಲ್ ಯಾ ಕ್ರಿಮಿನಲ್ ಪ್ರಕರಣವು ಒಂದೊಂದು ರೀತಿಯ ಪಾಠವನ್ನು ವಕೀಲರಿಗೆ ಉಣ ಬಡಿಸುವುದರಲ್ಲಿ ಎರಡು ಮಾತಿಲ್ಲ.

ನವೆಂಬರ್ 26ರಂದು ಕಾನೂನು ದಿನ. ಅದಾದ ಒಂದು ವಾರ ಬಿಟ್ಟು ಡಿಸೆಂಬರ್ 3 ರಂದು ವಕೀಲರ ದಿನವನ್ನು ಆಚರಿಸಲಾಗುತ್ತದೆ. ಎರಡೂ ಕಾನೂನಿಗೆ ಸಂಬಂಧಿಸಿದ್ದಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಗೌರವಯುತವಾಗಿ ಸೇವೆ ಸಲ್ಲಿಸುತ್ತಿರುವ ವಕೀಲರು ತಮ್ಮ ವೃತ್ತಿ ದಿನವಾಗಿ ಈ ದಿನವನ್ನು ಭಾರತದಾದ್ಯಂತ ಆಚರಿಸುತ್ತಿದ್ದಾರೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲೊಬ್ಬರಾದ, ಸ್ವತಃ ನ್ಯಾಯವಾಗಿಯೂ ಆಗಿದ್ದ ಸ್ವತಂತ್ರ್ಯ ಭಾರತದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ಹುಟ್ಟುಹಬ್ಬವೂ ಹೌದು. ನ್ಯಾಯ ತೀರ್ಮಾನ ಮಾಡುವ ಜನತೆಯ ಪಾಲಿನ ದೇವಾಲಯವೆಂದೇ ಪ್ರಸಿದ್ಧಿ ಪಡೆದ ಈ ನ್ಯಾಯಾಲಯದಲ್ಲಿ ಹಗಲಿರುಳು ಕಾರ್ಯನಿರ್ವಹಿಸುವವರಿಗೂ ವರ್ಷದಲ್ಲಿ ಒಂದು ದಿನವನ್ನು ತಮ್ಮ ದಿನವನ್ನಾಗಿ ಆಚರಣೆ ಮಾಡುವುದು ಅವಶ್ಯಕ.

ವಕೀಲರು ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಪಟ್ಟವರಾಗಿದ್ದು, ಪ್ರಸ್ತುತ ವಕೀಲರು ಸಾಮಾಜಿಕ, ನ್ಯಾಯಾಂಗ, ಇತರ ಎಲ್ಲಾ ತರಹದ ಕಳಕಳಿ ಉಳ್ಳವರಾಗಿದ್ದರು, ಸಮಾಜದಲ್ಲಿ ಕುಂದುಕೊರತೆ, ನ್ಯೂನತೆ ಕಂಡು ಬಂದಲ್ಲಿ ಕಾನೂನು ರೀತಿಯ ಪರಿಹಾರ ಕೈಗೊಳ್ಳುವುದು, ಮನಸ್ಸು, ಪರಿವರ್ತನೆ ಹಾಗೂ ಜನತೆಯ ಒಡನಾಡ ವಕೀಲರ ವೃತ್ತಿ ಮನಸ್ಸಿಗೆ ಸಂತೋಷ ಕೊಡುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ವಕೀಲರು ಭಾಗವಹಿಸಿದರೆ ಆಗ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಬಹುದು.

ನ್ಯಾಯವಾದಿಗಳಿಗೆ ವಕೀಲರಾಗಿ ಸಾಮಾಜಿಕ ನ್ಯಾಯ ಸೇವೆಯಲ್ಲಿ ಭಾಗವಹಿಸಿ, ಆತ್ಮ ತೃಪ್ತಿ ಇರುತ್ತದೆ. ದೇಶ – ರಾಜ್ಯದ ವಿದೇಶ ವಿಷಯಗಳಿಗೆ ಸಂಬಂಧಿಸಿದಂತೆ ಆಗು ಹೋಗುವ ವಿಚಾರಗಳನ್ನು ಜನತೆಗೆ ತಲುಪಿಸುವ ಕಾರ್ಯ ವಕೀಲರು ಕಾರ್ಯಗತಗೊಳಿಸುತ್ತಾರೆ.

– ಶಿರಿಯಾರ ಪ್ರಭಾಕರ ನಾಯಕ್ ನ್ಯಾಯಾವಾದಿ ಮತ್ತು ನೋಟರಿ ಪಬ್ಲಿಕ್, ಭಾರತ ಸರಕಾರ ಗೌರವ ಮಧ್ಯಸ್ಥಿಕೆದಾರರು, ಉಡುಪಿ