ಉಡುಪಿ: ಯಾವುದೇ ಒಂದು ಪ್ರತಿಭೆ ಹೊರಹೊಮ್ಮಲು ಅದಕ್ಕೆ ಸೂಕ್ತ ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಹೆಬ್ರಿಯ ಚಾಣಕ್ಯ ಸಂಸ್ಥೆ ಕಳೆದ 7 ವಷ೯ಗಳಿಂದ ಸಂಗೀತ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಕಾಯ೯ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಹೇಳಿದರು.
ನ.6 ರಂದು ಉಡುಪಿ ಸೃಷ್ಟಿ ಸಂಗೀತ ತರಬೇತಿ ಕೇಂದ್ರದಲ್ಲಿ ಚಾಣಕ್ಯ ಇನ್ಸಿಟ್ಯೂಟ್ ಆಫ್ ಮ್ಯೂಸಿಕ್ ಹೆಬ್ರಿ ಇದರ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ವಾಯ್ಸ್ ಆಫ್ ಚಾಣಕ್ಯ 2022 ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆಯ ಸ್ಪರ್ಧಾಳುಗಳ ಆಯ್ಕೆ ಪ್ರಕ್ರಿಯೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸೃಷ್ಟಿ ಸಂಗೀತ ತರಬೇತಿ ಕೇಂದ್ರದ ಆಡಳಿತ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ವಹಿಸಿದ್ದರು.
ಸಮಾರಂಭದಲ್ಲಿ ಚಿತ್ರಕಲಾ ಶಿಕ್ಷಕ ರಮೇಶ್ ಕಿದಿಯೂರು, ತೀಪು೯ಗಾರರಾದ ಸಂಗೀತ ಶಿಕ್ಷಕಿ ಸ್ವಾತಿ ಭಟ್ ಉಡುಪಿ, ಜಯಶ್ರೀ ಕೋಟ್ಯಾನ್ ಕಟಪಾಡಿ, ಸೃಷ್ಟಿ ಫೌಂಡೇಶನ್ ನ ಅಧ್ಯಕ್ಷೆ ಪ್ರೀತಿ ಪಿ.ಸುವರ್ಣ, ಎಸ್ ಪಿ ಮ್ಯೂಸಿಕ್ ನ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸಾದ್ ಹೆಬ್ರಿ ಕಾಯ೯ಕ್ರಮ ನಿರೂಪಿಸಿ,
ಚಾಣಕ್ಯ ಸಂಸ್ಥೆಯ ಉಪನ್ಯಾಸಕಿ ಶತಾ ಶೆಟ್ಟಿ ವಂದಿಸಿದರು.
ಉಡುಪಿ ಜಿಲ್ಲೆಯ ಸುಮಾರು 40ಕ್ಕೂ ಹೆಚ್ಚು ಸ್ಪರ್ಧಾಳುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಆಯ್ಕೆಯಾದರು ಸೆಮಿಫೈನಲ್ ಹಾಗೂ ಫೈನಲ್ ಪ್ರವೇಶಿಸುವ ಅವಕಾಶ ಹೊಂದಿದ್ದಾರೆ.
ವಿಜೇತರಿಗೆ ಪ್ರಥಮ ಬಹುಮಾನ 7777 ರೂ, ದ್ವಿತೀಯ ಬಹುಮಾನ 4444 ಹಾಗೂ ತೃತೀಯ ಬಹುಮಾನ 2222ರೂ. ಇದರ ಜೊತೆಗೆ /- ಟ್ರೋಫಿ ಮತ್ತು ಪ್ರಮಾಣಪತ್ರ ನೀಡಲಾಗುವುದು. 3 ಜನ ಉತ್ತಮ ಗಾಯಕರಿಗೆ ಸಮಾಧಾನಕರ ಬಹುಮಾನ 1111ರೂ ಮತ್ತು ಪ್ರಮಾಣಪತ್ರ ಹಾಗೂ 3 ಜನ ಗಾಯಕರಿಗೆ ತೀರ್ಪುಗಾರರ ಪ್ರಮಾಣ ಪತ್ರದೊಂದಿಗೆ ಉಡುಗೊರೆಗಳು ದೊರೆಯಲಿವೆ ಎಂದು ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ತಿಳಿಸಿದರು.