ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಾನವ ಹಕ್ಕು, ಸೈಬರ್ ಕ್ರೈಂ ಹಾಗೂ ಸಂಚಾರಿ ನಿಯಮಗಳ ಕುರಿತು ಮಾಹಿತಿ ಶಿಬಿರ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಾನವ ಹಕ್ಕುಗಳು ಹಾಗೂ ಸೈಬರ್ ಕ್ರೈಂ ಜಾಗೃತಿ ಹಾಗೂ ಸಂಚಾರಿ ನಿಯಮಗಳ ಕುರಿತು ಕಾರ್ಯಕ್ರಮವನ್ನು ನಡೆಸಲಾಯತು.

ವಕೀಲರಾದ ಪ್ರೀತಿ ವೈ ಕುಂದಾಪುರ ಇವರು ಮಾನವ ಹಕ್ಕುಗಳ ಕುರಿತು ಸೂಕ್ತ ಮಾಹಿತಿಯನ್ನು ನೀಡಿದರು. ಬಿ ಚಂದ್ರ ಅಮೀನ್ ಮಾನವ ಹಕ್ಕುಗಳ ಕುರಿತಾಗಿ, ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಸೈಬರ್ ಕ್ರೈಂ ನ ಕುರಿತಾಗಿ, ವಕೀಲೆ ಬಿಂದು ತಂಗಪ್ಪ ಹಾಗೂ ದಯಾನಂದ ಶೆಟ್ಟಿ ಟ್ರಾಫಿಕ್ ನಿಯಮದ ಕುರಿತು ಮತ್ತು ಇತರೆ ಹತ್ತು ಹಲವು ವಿಷಯಗಳ ಕುರಿತು ಸೂಕ್ತವಾದ ಹಾಗೂ ಅತ್ಯುನ್ನತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಿರ್ದೇಶಕಿ ಶ್ರೀಮತಿ ಮಮತಾ ಪ್ರಾಂಶುಪಾಲೆ ಶ್ರೀಮತಿ ಡಾ ಸೀಮಾ ಜಿ ಭಟ್ ಹಾಗೂ ವಿದ್ಯಾ ಸಂಸ್ಥೆಯ ಎಲ್ಲ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾಹಿತಿ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.