ಮಲ್ಪೆ: ಶ್ರೀರಾಮ ಮಂದಿರದಲ್ಲಿ ವಿಶ್ವರೂಪ ದರ್ಶನ

ಮಲ್ಪೆ: ಕಾರ್ತಿಕ ಮಾಸದ ಏಕಾದಶಿ ಅಂಗವಾಗಿ ಮಲ್ಪೆ ಶ್ರೀ ರಾಮಮಂದಿರದಲ್ಲಿ ಜಿ ಎಸ್ ಬಿ ಸಮಾಜ ಯುವಕ ಮತ್ತು ಮಹಿಳಾ ಮಂಡಳಿಯ ಆಶ್ರಯದಲ್ಲಿ ಗುರುವಾರದಂದು ಭಜನಾ ಕಾರ್ಯಕ್ರಮ ಹಾಗೂ ರಾತ್ರಿ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವರೂಪ ದರ್ಶನ ನೆರವೇರಿತು.

ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶ್ರೀರಾಮ ದರ್ಶನ, ವೀರ ವಿಠಲ, ರಂಗೋಲಿಯ ಚಿತ್ತಾರ, ಹೂಗಳಿಂದ ರಚಿಸಿದ ರಂಗೋಲಿ , ಹಣತೆಯ ದೀಪದಿಂದ ಓಂ , ಸ್ವಸ್ತಿಕ್, ಶಂಖ ಚಕ್ರ ಗಳನ್ನು ರಚಿಸಲಾಗಿತ್ತು.

ಭಕ್ತರು ದೇವತಾ ಕಾರ್ಯದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.