ನಿಷೇಧ, ದಂಡಕ್ಕೂ ಜಗ್ಗದ ದೆಹಲಿಗರು: ದೀಪಾವಳಿಯಂದು ಪಟಾಕಿ ಸಿಡಿಸಿ ಸಂಭ್ರಮ ಆಚರಣೆ

ದೆಹಲಿ: ದೀಪಾವಳಿಯಂದು ಪಟಾಕಿ ಸಿಡಿಸದಂತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರವು ಪಟಾಕಿಗಳ ಮೇಲೆ ನಿಷೇಧ ಹೇರಿದ್ದರೂ ದೆಹಲಿಗರು ಮಾತ್ರ ಇದಕ್ಕೆ ಕ್ಯಾರೇ ಅನ್ನದೆ ಪಟಾಕಿ ಸಿಡಿಸಿ ದೀಪಾವಳಿಯ ಸಂಭ್ರಮವನ್ನು ಆಸ್ವಾದಿಸಿದ್ದಾರೆ.

ದೀಪಾವಳಿಯಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ₹ 200 ದಂಡ ವಿಧಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಕಳೆದ ವಾರ ಹೇಳಿದ್ದರು. ಕಾನೂನು ಪ್ರತಿಬಂಧಕ ಜಾರಿಯಲ್ಲಿದ್ದರೂ, ದಕ್ಷಿಣ ಮತ್ತು ವಾಯುವ್ಯ ದೆಹಲಿ ಸೇರಿದಂತೆ ನಗರದ ಅನೇಕ ಭಾಗಗಳಲ್ಲಿ ಜನರು ಮುಸ್ಸಂಜೆಯ ಹೊತ್ತಿಗೆ ಪಟಾಕಿಗಳನ್ನು ಸಿಡಿಸಲು ಪ್ರಾರಂಭಿಸಿದರು. ಅತಿ ಹೆಚ್ಚಿನ ತೀವ್ರತೆಯ ಪಟಾಕಿಗಳನ್ನು ಸಿಡಿಸಿ ದೆಹಲಿಗರು ಸರ್ಕಾರದ ಆದೇಶಕ್ಕೆ ಸಡ್ಡು ಹೊಡೆದಿದ್ದಾರೆ. ರಾತ್ರಿಯು ಮುಂದುವರೆದಂತೆ ಪಟಾಕಿಗಳ ತೀವ್ರತೆಯು ನಿಗದಿತ ಡೆಸಿಬಲ್ ಮಿತಿಗಳನ್ನು ಮೀರಿ, ಇಲ್ಲಿ ” ನಿಷೇಧವಿದೆಯೇ” ಎಂದು ಜನರು ಆಶ್ಚರ್ಯಪಡುವಂತೆ ಮಾಡಿದೆ.

ದೆಹಲಿಯಲ್ಲಿ ಸೋಮವಾರ ಬೆಳಗ್ಗೆ ವಾಯು ಗುಣಮಟ್ಟವ್ಯ್ ಕಳಪೆಯಾಗಿತ್ತು ಎಂದು ವರದಿಯಾಗಿದೆ.