ಉಡುಪಿ: ಅಂಬಲಪಾಡಿ ಬೈಪಾಸ್ ಬಳಿಯ ಬ್ರಹ್ಮಗಿರಿ ಸುರಭಿ ಲೋಟಸ್ ನಲ್ಲಿ ಬ್ರೌನ್ ವುಡ್ ಫರ್ನೀಚರ್ ಶೋರೂಂನ ಉದ್ಘಾಟನೆ ಕಾರ್ಯಕ್ರಮವು ಅ.16ರ ಬೆಳಿಗ್ಗೆ 9:30ಕ್ಕೆ ನಡೆಯಲಿದೆ.
ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇಗುಲದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿಯ ಡಿಜಿಎಂ ಲೀನಾ ಪಿಂಟೋ, ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ಉದ್ಯಾವರ ಸಾಯಿರಾಮ್ ಇಂಟೀರಿಯರ್ಸ್ ಯ್ಯಾಂಡ್ ಡೆಕೋರೇಟರ್ಸ್ ನ ಯತೀಶ್ ಅಂಚನ್, ತ್ರಾಸಿ ಅಂಬಾ ಎಲೆಕ್ಟ್ರಿಕಲ್ಸ್ ಯ್ಯಾಂಡ್ ಫರ್ನೀಚರ್ ನ ಸುಧಾಕರ ಶೆಟ್ಟಿ, ಸುರಭಿ ಬಿಲ್ಡರ್ಸ್ ಯ್ಯಾಂಡ್ ಡೆವಲಪರ್ಸ್ ನ ಪ್ರಭಾಕರ ಭಟ್, ಉದ್ಯಮಿ ಅಬೂಬಕ್ಕರ್ ಕಿದಿಯೂರು, ಅಲೆವೂರು ವಿಕೆ ದೇವಲಪರ್ಸ್ ನ ಕಾರ್ತಿಕ್ ಶೆಟ್ಟಿ, ಮಲ್ಪೆ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಕ್ತಿವೇಲು ಉಪಸ್ಥಿತರಿರಲಿದ್ದಾರೆ.
ಈ ಶೋ ರೂಂನಲ್ಲಿ ಫರ್ನೀಚರ್ಸ, ಇಂಟೀರಿಯರ್ಸ್, ಕರ್ಟನ್ಸ್, ವಾಲ್ ಪೇಪರ್ಸ್ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.