ಲಿಯಾ ಕಾಸ್ಟಿಂಗ್ ಎನ್ ಚಿತಾರಾ ತಂಡದಿಂದ ಹಿರಿಯ ಕಲಾವಿದರಿಗೆ ಗೌರವ

ಉಡುಪಿ: ಕನ್ನಡ ಚಿತ್ರರಂಗದ 15 ಹಿರಿಯ ಕಲಾವಿದರನ್ನು ಲಿಯಾ ಕಾಸ್ಟಿಂಗ್ ಎನ್ ಚಿತಾರಾ ಟ್ರಸ್ಟ್ ವತಿಯಿಂದ ಗೌರವಿಸಲಾಗಿದ್ದು, ಕಲಾವಿದರಿಗೆ ಆರ್ಥಿಕವಾಗಿ ಸಹಾಯ ಮಾಡಲಾಗಿದೆ. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರರಂಗದ ವಿವಿಧ ಚೇಂಬರ್ ಗಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.