ಮಂದಾರ್ತಿ: ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ವಿ. ಪ್ರಾ. ಸ. ಸಂಘವು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದ್ದು, ಮೀನುಗಾರರ ಸಹಕಾರಿ ಸಂಘವು ಮಾದರಿ ಆರ್ಥಿಕ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ನಾಡೋಜ ಡಾ.ಜಿ.ಶಂಕರ್ ಹೇಳಿದರು.
ಅವರು ಶುಕ್ರವಾರ ಮಂದಾರ್ತಿ ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ವಿವಿಧೋದ್ದೇಶ ಪ್ರಾಥಮಿಕ ಸಹಕಾರಿ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘದ ಭದ್ರತಾ ಕೊಠಡಿಯನ್ನು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಧನಂಜಯ ಶೆಟ್ಟಿ ಹಾಗೂ ಕಂಪ್ಯೂಟರ್ ಅನ್ನು ಉದ್ಯಮಿ ಗಣೇಶ್ ಪ್ರಸಾದ್ ಕಾಂಚನ್ ಶಿರಿಯಾರ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಮರಕಾಲ ಶಿರಿಯಾರ ವಹಿಸಿದ್ದರು.
ಈ ಸಂದರ್ಭದಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಧನಂಜಯ ಶೆಟ್ಟಿ, ಧಾರ್ಮಿಕ ಮುಖಂಡ ಗಣೇಶ್ ಪ್ರಸಾದ್ ಕಾಂಚನ್ ಶಿರಿಯಾರ, ಸಂಘದ ಅಧ್ಯಕ್ಷ ರಾಜೀವ ಮರಕಾಲ, ಕಟ್ಟಡ ಮಾಲೀಕ ಪ್ರಭಾಕರ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಗುರ್ಕಾರರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಸ್.ಸಿ ಕೊಟಾರಗಸ್ತಿ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್ .ಗಂಗಾಧರ್ ಶೆಟ್ಟಿ, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್, ಶ್ರೀ ಕುಲಮಾಹಾಸ್ತ್ರೀ ಮೀನುಗಾರರ ವಿವಿಧೋದ್ದೇಶ ಪ್ರಾಥಮಿಕ ಸಹಕಾರಿ ಸಂಘದ ಉಪಾಧ್ಯಕ್ಷ ಗಣೇಶ್ ಕುಂದರ್, ಮಂದಾರ್ತಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಮಿಥುನ್ ಬಂಗೇರ, ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರೇಮಾ, ಬಾರ್ಕೂರು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರತ್ನಾವತಿ ಉಪಸ್ಥಿತರಿದ್ದರು.
ಶಿವರಾಮ ಕೆ.ಎಂ ನಿರೂಪಿಸಿ, ರವಿರಾಜ್ ವಂದಿಸಿದರು. ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ್ ಸಹಕರಿಸಿದರು.