ಉಡುಪಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8 ನೇ ತರಗತಿ) ನೇರ ನೇಮಕಾತಿಗೆ ಸಂಬಂಧಿಸಿದಂತೆ 1:2 ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು schooleducation.kar.nic.in ನಲ್ಲಿ ಪ್ರಕಟಿಸಲಾಗಿರುತ್ತದೆ.
ಸದರಿ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಕಾರ್ಯವು, ಮಣಿಪಾಲದ ರಜತಾದ್ರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿನ ಸಮಾಜ ವಿಷಯದ 1 ರಿಂದ 40 ರ ವರೆಗಿನ ಕ್ರಮ ಸಂಖ್ಯೆಯ ಅಭ್ಯರ್ಥಿಗಳಿಗೆ ಅಕ್ಟೋಬರ್ 6 ರಂದು ಬೆಳಗ್ಗೆ ಹಾಗೂ 41 ರಿಂದ 100 ರ ವರೆಗಿನ ಕ್ರಮ ಸಂಖ್ಯೆಯ ಅಭ್ಯರ್ಥಿಗಳಿಗೆ ಮಧ್ಯಾಹ್ನ, ಅ. 7 ರಂದು 101 ರಿಂದ 150 ರ ವರೆಗಿನ ಕ್ರಮ ಸಂಖ್ಯೆಯ ಅಭ್ಯರ್ಥಿಗಳು ಬೆಳಗ್ಗೆ, 151 ರಿಂದ 181 ರ ವರೆಗಿನ ಕ್ರಮ ಸಂಖ್ಯೆಯ ಅಭ್ಯರ್ಥಿಗಳಿಗೆ ಮಧ್ಯಾಹ್ನ ಹಾಗೂ ಗಣಿತ ಮತ್ತು ವಿಜ್ಞಾನ ವಿಷಯದ 01 ರಿಂದ 20 ರ ವರೆಗಿನ ಕ್ರಮ ಸಂಖ್ಯೆಯ
ಅಭ್ಯರ್ಥಿಗಳಿಗೆ ಮಧ್ಯಾಹ್ನ, 21 ರಿಂದ 70 ರ ವರೆಗಿನ ಕ್ರಮ ಸಂಖ್ಯೆಯ ಅಭ್ಯರ್ಥಿಗಳಿಗೆ ಅ. 10 ರ ಬೆಳಗ್ಗೆ ಹಾಗೂ 71 ರಿಂದ 120 ರ ವರೆಗಿನ ಕ್ರಮ ಸಂಖ್ಯೆಯ ಅಭ್ಯರ್ಥಿಗಳಿಗೆ ಮಧ್ಯಾಹ್ನ ಮತ್ತು ಅ. 11 ರಂದು 121 ರಿಂದ 177 ರ ವರೆಗಿನ ಕ್ರಮ ಸಂಖ್ಯೆಯ ಅಭ್ಯರ್ಥಿಗಳಿಗೆ ಬೆಳಗ್ಗೆ, 1 ರಿಂದ 23 ರ ವರೆಗಿನ ಕ್ರಮ ಸಂಖ್ಯೆಯ ಜೀವಶಾಸ್ತ್ರ ವಿಷಯದ ಶಿಕ್ಷಕರಿಗೆ ಹಾಗೂ 1 ರಿಂದ 36 ರ ವರೆಗಿನ ಆಂಗ್ಲಭಾಷಾ ಶಿಕ್ಷಕರಿಗೆ ಮಧ್ಯಾಹ್ನದ ಅವಧಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.