ಉಡುಪಿ: ಫ್ರಾನ್ಸಿನ ಲಿಯೋನ್ನಲ್ಲಿ ವಿಶ್ವ ಕೌಶಲ್ಯ ಸ್ಪರ್ಧೆ ನಡೆಯಲಿರುವ ಹಿನ್ನೆಲೆ ಇಂಡಿಯಾ ಸ್ಕಿಲ್ ಕಾಂಪಿಟೇಷನ್ ಕರ್ನಾಟಕ ಸ್ಪರ್ಧೆಗೆ ಪೂರ್ವಭಾವಿಯಾಗಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಅರ್ಹ ಅಭ್ಯರ್ಥಿಗಳನ್ನು ವಿವಿಧ ಹಂತಗಳಲ್ಲಿ ಆಯ್ಕೆ ಮಾಡುವ ಸಲುವಾಗಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅರ್ಹತಾ ಸುತ್ತುಗಳ ಆಯ್ಕೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಅರ್ಹತಾ ಸುತ್ತುಗಳಲ್ಲಿ ವಿಜೇತರಾದ ಸ್ಪರ್ಧಿಗಳು ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾಗಲಿದ್ದು, ಸ್ಪರ್ಧೆಯಲ್ಲಿ 2002 ಜನವರಿ 1 ರ ನಂತರ ಜನಿಸಿದ 17 ರಿಂದ 21 ವರ್ಷ ವಯಸ್ಸಿನ ಅಭ್ಯರ್ಥಿಗಳು 45 ವಿವಿಧ ಕೌಶಲ್ಯ ವಿಷಯಗಳಲ್ಲಿ ಹಾಗೂ 1999 ಜನವರಿ 1 ರ ನಂತರ ಜನಿಸಿದ 17 ರಿಂದ 24 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು 10 ವಿವಿಧ ಕೌಶಲ್ಯ ವಿಷಯಗಳಲ್ಲಿ ಭಾಗವಹಿಸಲು ನವೆಂಬರ್ 15 ರ ಒಳಗೆ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್ https://www.kaushalkar.com/world-skills-2/
https://www.kaushalkar.com/app/world-skill-registration ಅಥವಾ ಸಹಾಯವಾಣಿ ಸಂಖ್ಯೆ: 0820-2574204, 8277895930, 9739691294, 9449943882 ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮೊ.ನಂ: 9845463771 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.