ಪಡುಬಿದ್ರೆ: ಇಲ್ಲಿನ ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆ. 26 ಸೋಮವಾರದಿಂದ ಅ. 05 ಬುಧವಾರದ ತನಕ ಶ್ರೀದೇವಿ ಸನ್ನಿಧಾನದಲ್ಲಿ ನಡೆಯುವ ಶರನ್ನವರಾತ್ರಿ ಮಹೋತ್ಸವದ ಕಾರ್ಯಕ್ರಮವು ಪ್ರತೀ ವರ್ಷದಂತೆ ಭಕ್ತಾದಿಗಳ, ಆಸ್ತಿಕ ಮಹಾಶಯರ ಸಹಕಾರದೊಂದಿಗೆ ವೈಭವದಿಂದ ನಡೆಯಲಿರುವುದು. ಭಕ್ತಾದಿಗಳು ಈ ಪರ್ವ ಕಾಲದಲ್ಲಿ ಶ್ರೀದೇವಿಯ ದರ್ಶನ ಮಾಡಿ ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ ಎಂದು ಅಡೈ ನಂದಿಕೂರು, ಉಳ್ಳೂರು ಕೊಳಚೂರು ಗ್ರಾಮಸ್ಥರು ತಿಳಿಸಿದ್ದಾರೆ.
ಪರ್ಯಾಯ ತಂತ್ರಿಗಳು, ಅರ್ಚಕರಾದ ವಿದ್ವಾನ್ ಎನ್. ಜನಾರ್ದನ ಭಟ್, ಎನ್. ವೆಂಕಟೇಶ ಪುರಾಣಿಕ,
ಅರ್ಚಕ ಹಾಗೂ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್. ಮಧ್ವರಾಯ ಭಟ್, ಪವಿತ್ರ ಪಾಣಿ,
ಶೆಟ್ಟಿವಾಲ್ ಅಡ್ವೆ ಅರಂತಡೆ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಎನ್. ಜನಾರ್ದನ ಭಟ್, ವಸಂತ ಶೆಟ್ಟಿ, ವಿಮಲ ಬಿ. ಶೆಟ್ಟಿ, ಸುಂದರ, ಲಕ್ಷ್ಮಣ್ ಶೆಟ್ಟಿವಾಲ್, ಬಾಲಕೃಷ್ಣ ಸಾಲ್ಯಾನ್, ಶ್ರೀಮತಿ ಪ್ರೇಮ ರವಿ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.