ಕಡಿಯಾಳಿ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ.26ರಿಂದ ಅ.5ರ ವರೆಗೆ ನವರಾತ್ರಿ ಮಹೋತ್ಸವ

ಕಡಿಯಾಳಿ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ.26ರಿಂದ ಅ.5ರ ವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ ವಿ. ಆಚಾರ್ಯ ಹೇಳಿದರು.
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಬೆಳಿಗ್ಗೆ ಗಣಯಾಗ, ಚಂಡಿಕಾಯಾಗ, ಮಹಾಪೂಜೆ, ಹೂವಿನ ಪೂಜೆ ಹಾಗೂ ನವರಾತ್ರಿ ಮಹೋತ್ಸವ ನಡೆಯಲಿದೆ. ನವರಾತ್ರಿ ಹಿನ್ನೆಲೆಯಲ್ಲಿ ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ ಎಂದರು. ಸೆ.26ರಿಂದ ಅ.4ರ ವರೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮಗಳು:

ತಾ. 26-09-2022 ರಿಂದ ತಾ. 05-10-2022ರ ವರೆಗೆ ನವರಾತ್ರಿ ಪ್ರಾರಂಭ ಪ್ರತೀ ದಿನ ರಾತ್ರಿ 7.30 ರಿಂದ ಮಹಾಪೂಜೆ, ಹೂವಿನ ಪೂಜೆ, ಇತರ ಸೇವಾ ಪೂಜೆಗಳು ಪ್ರತೀ ದಿನ ರಾತ್ರಿ 8.00 ರಿಂದ ಕಲ್ಪೋಕ್ತ ಪೂಜೆ, ಬಲಿ ಬಲಿ ನವರಾತ್ರಿ ಉತ್ಸವ (ರಥೋತ್ಸವ) ತಾ. 27-09-2022ನೇ ಮಂಗಳವಾರ ಬೆಳಿಗ್ಗೆ 7.00 ಗಂಟೆಗೆ ಕದಿರು ಕಟ್ಟುವುದು ತಾ. 30-09-2022ನೇ ಶುಕ್ರವಾರ ಲಲಿತಾ ಪಂಚಮಿ ತಾ. 02-10-2022ನೇ ರವಿವಾರ ಶಾರದಾ ಪೂಜಾರಂಭ ಮಧ್ಯಾಹ್ನ ಬಲಿ (ಮಹಾನವಮಿಯವರೆಗೆ) ತಾ. 03-10-2022ನೇ ಸೋಮವಾರ ದುರ್ಗಾಷ್ಟಮಿ (ಮಹಾ ಚಂಡಿಕಾ ಹೋಮ) ತಾ. 04-10-2022ನೇ ಮಂಗಳವಾರ ರಾತ್ರಿ ಕನ್ನಿಕಾ ಪೂಜೆ, ಮಹಾ ಮಂತ್ರಾಕ್ಷತೆ ತಾ. 05-10-2022ನೇ ಬುಧವಾರ ವಿಜಯದಶಮಿ, ಶಾರದ ವಿಸರ್ಜನೆ.

ಸಾಂಸ್ಕೃತಿಕ ಕಾರ್ಯಕ್ರಮಗಳು:

ತಾ. 26-09-2022ನೇ ಸೋಮವಾರ ಸಾಯಂಕಾಲ 4:30 ರಿಂದ 5:30ರ ತನಕ ಶಾಂಭವಿ ಭಜನಾ ಮಂಡಳಿ ಕಡಿಯಾಳಿ ಇವರಿಂದ ಭಜನಾ ಕಾರ್ಯಕ್ರಮ 5:30 ರಿಂದ 7.00 ಗಂಟೆಯವರೆಗೆ “ಕಲಾರತ್ನ” ಉಡುಪಿ ಡಾ|ಜನಾರ್ಧನ ಹಾಗೂ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ವಿಜೇತೆ ಮೇಘನ ಸಾಲಿಗ್ರಾಮ ಇವರಿಂದ ದ್ವಂದ್ವ ಸ್ನಾಕ್ಸೋಫೋನ್ ವಾದನ. ರಾತ್ರಿ 7.00ರಿಂದ ದೊಡ್ಡಣಗುಡ್ಡೆ ಮಹಿಳಾ ಮಂಡಳಿ ಇವರ ವತಿಯಿಂದ ತುಳು ಹಾಸ್ಯಮಯ ಸಾಂಸಾರಿಕ ನಾಟಕ “ಅಪ್ಪೆನ ಮೋಕೆ” (ಕಥೆ, ನಿರ್ದೇಶನ- ದಿವಾಕರ ಪೂಜಾರಿ ಸಂಗೀತ – ರವಿರಾಜ್ ಪಿತ್ರೋಡಿ) ತಾ. 27-09-2022ನೇ ಮಂಗಳವಾರ ಸಾಯಂಕಾಲ 4:30 ರಿಂದ 5:30ರ ತನಕ ನಾರಾಯಣಿ ಭಜನಾ ಮಂಡಳಿ ಕಡಿಯಾಳಿ ಇವರಿಂದ ಭಜನೆ 5:30 ರಿಂದ ಯಕ್ಷ ಮಂಜುಳ ಕದ್ರಿ ಮಂಗಳೂರು ಮಹಿಳಾ ಯಕ್ಷಗಾನ ಬಳಗ ಕದ್ರಿ ಇವರಿಂದ ಯಕ್ಷಗಾನ ತಾಳ ಮದ್ದಳೆ ಪ್ರಸಂಗ “ದಕ್ಷಯಜ್ಞ” ತಾ. 28-09-2022ನೇ ಬುಧವಾರ ಸಾಯಂಕಾಲ 4:30 ರಿಂದ 5:30ರ ತನಕ ಕಾತ್ಯಾಯಿನಿ ಭಜನಾ ಮಂಡಳಿ ಕಡಿಯಾಳಿ ಇವರಿಂದ ಭಜನೆ 5.30 ರಿಂದ 6:30ರ ತನಕ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಸಂಜೆ 6.00ರಿಂದ ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ (ರಿ.) ಮೈಸೂರು ಇವರಿಂದ “ನೃತ್ಯ ವೈಭವ” ತಾ. 29-09-2022ನೇ ಗುರುವಾರ ಸಾಯಂಕಾಲ 4:30 ರಿಂದ 5:30ರ ತನಕ ಪಾರ್ವತಿ ಭಜನಾ ಮಂಡಳಿ ಕಡಿಯಾಳಿ ಇವರಿಂದ ಭಜನಾ ಕಾರ್ಯಕ್ರಮ 5.30 ರಿಂದ 7.00ರ ತನಕ ಕುಂಜಿಬೆಟ್ಟು ಮಹಿಳಾ ಮಂಡಳಿಯಿಂದ “ಕಿರು ಪ್ರಹಸನ” ಮತ್ತು ಮಕ್ಕಳಿಂದ “ನೃತ್ಯ” ಕಾರ್ಯಕ್ರಮ 7.00 ರಿಂದ “ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ.)” ಕಡಿಯಾಳಿ ಇದರ ಮಹಿಳಾ ತಂಡದಿಂದ “ನೃತ್ಯ ವೈಭವ” ತಾ. 30-09-2022ನೇ ಶುಕ್ರವಾರ 4.30 ರಿಂದ 5.30 ರ ತನಕ ಭೈರವಿ ಭಜನಾ ಮಂಡಳಿ, ಕಡಿಯಾಳಿ ಇವರಿಂದ ಭಜನೆ 5.30 ರಿಂದ ಡಾ|ವಾಣಿಶ್ರೀ ಕಾಸರಗೋಡು ಇವರಿಂದ “ಗಡಿನಾಡಿನ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ”. ತಾ. 01-10-2022ನೇ ಶನಿವಾರ ಸಾಯಂಕಾಲ 4.30 ರಿಂದ 5.30 ರ ತನಕ ಆದಿಶಕ್ತಿ ಭಜನಾ ಮಂಡಳಿ ಇಂದ್ರಾಳಿ ಇವರಿಂದ ಭಜನೆ 5.30 ರಿಂದ ಶ್ರೀ ಯಕ್ಷ ವಿಶ್ವ ಬಳಗ ಶ್ರೀ ಸೋದೆ ವಾದಿರಾಜ ಮಠ ಉಡುಪಿ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಸಂಗ “ರುಕ್ಮಾವತಿ ಕಲ್ಯಾಣ” ನಿರ್ದೇಶನ ಮತ್ತು ಭಾಗವತರು ರತ್ನಾಕರ ಶೆಣೈ ಶಿವಪುರ ತಾ. 02-10-2022ನೇ ರವಿವಾರ ಸಾಯಂಕಾಲ 4:30 ರಿಂದ 5:30ರ ತನಕ ಶ್ರೀ ಕೃಷ್ಣ ಗೀತಾ ಭಜನಾ ಮಂಡಳಿ ಉಡುಪಿ ಇವರಿಂದ ಭಜನೆ  5.30 ರಿಂದ ಸಾಕ್ಷಿತ್ ವಾರಂಬಳ್ಳಿ ಇವರಿಂದ  “ಮ್ಯಾಂಡೋಲಿನ್ ವಾದನ” 6.30ರಿಂದ ಯು. ನಾಗರಾಜ್ ಶೇಟ್ ಉಡುಪಿ ಇವರ ಬಳಗದವರಿಂದ “ಭಕ್ತಿ ಸುಗಮ ಸಂಗೀತ” ಕಾರ್ಯಕ್ರಮ ತಾ. 03-10-2022ನೇ ಸೋಮವಾರ 4.30 ರಿಂದ 5:30ರ ವರೆಗೆ ಆಂಜನೇಯ ಭಜನಾ ಮಂಡಳಿ ದೊಡ್ಡಣ್ಣಗುಡ್ಡೆ ಇವರಿಂದ ಭಜನೆ 5:30 ರಿಂದ 7.00ರ ತನಕ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಳ ಉಡುಪಿ (ರಿ.) ಇವರಿಂದ “ಮಧ್ವಯಾನ ಗಾನ ನಮನ” ಸಂಜೆ 7.00ರಿಂದ ಶ್ರೀ ಓಬು ಸೇರಿಗಾರ ಇವರ ಮೊಮ್ಮಗಳಾದ ಅಕ್ಷತಾ ದೇವಾಡಿಗ ಇವರಿಂದ “ಸ್ನಾಕ್ಸೋ ಫೋನ್” ವಾದನ ತಾ. 04-10-2022ನೇ ಮಂಗಳವಾರ ಸಾಯಂಕಾಲ 4:30 ರಿಂದ 5:30ರವರೆಗೆ ಶ್ರೀ ದುರ್ಗಾ ಭಜನಾ ಮಂಡಳಿ, ದೊಡ್ಡಣ್ಣ ಗುಡ್ಡೆ ಇವರಿಂದ ಭಜನೆ ಸಂಜೆ  6.00ರಿಂದ ಕಲಾ ಚಾವಡಿ ಅಂಬಲಪಾಡಿ ಉಡುಪಿ ಇವರಿಂದ ತುಳು ಹಾಸ್ಯಮಯ ನಾಟಕ “ಮೋಕೆದ ಮದಿಮಾಲ್” ನಿರ್ದೇಶನ ಕಲಾ ವೈಖರಿ ಅಭಿನಯ ಸಾಮ್ರಾಟ್ ಪ್ರಭಾಕರ್ ಆಚಾರ್ಯ, ಮೂಡುಬೆಳ್ಳೆ, ಸಂಗೀತ- ಮಧುಕರ್ ಕಟಪಾಡಿ.  ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ವ್ಯವಸ್ಥಾಪನಾ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾಗರಾಜ ಶೆಟ್ಟಿ, ಕೆ. ಮಂಜುನಾಥ್ ಹೆಬ್ಬಾರ್, ರಮೇಶ್ ಶೇರಿಗಾರ್, ಕಿಶೋರ್ ಸಾಲಿಯಾನ್, ಗಣೇಶ ನಾಯ್ಕ್, ಗಂಗಾಧರ ಹೆಗ್ಡೆ ಉಪಸ್ಥಿತರಿದ್ದರು.