ಶಿವಳ್ಳಿ: ಇಲ್ಲಿನ ಕುಂಜಿಬೆಟ್ಟುವಿನ ಎಲ್‌ಎಲ್‌ಆರ್ ಮಾರ್ಗದ ನಿವಾಸಿ ವೈಷ್ಣವಿ ಮಡಿ ತಮ್ಮ ತಂದೆ-ತಾಯಿ ಮತ್ತು ಕುಟುಂಬಸ್ಥರೊಂದಿಗೆ ನೇಪಾಳಕ್ಕೆ ಪ್ರವಾಸ ಹೋಗಿದ್ದು, ಸೆ. 09 ರಿಂದ ಸೆ 10 ರವರೆಗೆ ರಾತ್ರಿ 9 ಗಂಟೆಯಿಂದ ಮರುದಿನ 10.45 ರೊಳಗೆ ಮನೆಯ ಮುಖ್ಯದ್ವಾರದ ಬಾಗಿಲನ್ನು ಕಳ್ಳರು ಆಯುಧದಿಂದ ಮುರಿದು ಒಳಪ್ರವೇಶಿಸಿ, ಮನೆಯ ದೇವರ ಕೋಣೆಯಲ್ಲಿದ್ದ 500 ಗ್ರಾಂ ತೂಕದ ಬೆಳ್ಳಿಯ ದೇವರ ಪೀಠ, 50 ಗ್ರಾಂ ತೂಕದ ಬೆಳ್ಳಿಯ ಸಣ್ಣ ತಟ್ಟೆ, 150 ಗ್ರಾಂ ತೂಕದ ಬೆಳ್ಳಿಯ ಅರಶಿನ ಕುಂಕುಮ ಪಾತ್ರೆ, 20 ಗ್ರಾಂ ತೂಕದ ಬೆಳ್ಳಿಯ ಸಣ್ಣ ಕುಂಕುಮ ಕರಡಿಗೆ, 25 ಗ್ರಾಂ ತೂಕದ ಬೆಳ್ಳಿಯ ಗಣಪತಿಯ ಪೀಠ ಸೇರಿ ಒಟ್ಟು 845 ಗ್ರಾಂ ತೂಕದ ಬೆಳ್ಳಿ ಸಾಮಾಗ್ರಿಗಳು ಮತ್ತು ಸಿಸಿ ಟಿವಿ ಡಿವಿಆರ್, ವೈಫೈ ರೂಟರ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂಪಾಯಿ 64,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.