ಉಡುಪಿ: ಬನ್ನಂಜೆ ರಾ.ಹೆ ಸನಿಹದಲ್ಲಿರುವ ವ್ಯವಹಾರ್ ಪ್ಲಾಜಾ ಕಟ್ಟಡದಲ್ಲಿ 15 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಂಜುನಾಥ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಗೆ ಎನ್.ಎ.ಬಿ.ಎಚ್ ಅಕ್ರೆಡಿಟೇಶನ್ ಸರ್ಟಿಫಿಕೇಟ್ ದೊರೆತಿದೆ.
ಫೆಕೊ ಮತ್ತು ಮೆಳ್ಳೆಗಣ್ಣು ತಜ್ಞೆ ಡಾ.ಶಕಿಲಾ, ರೆಟಿನಾ ತಜ್ಞ ಡಾ. ಸಚಿನ್ ಕುಮಾರ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆ ಸದಾ ಲಭ್ಯರಿರುವ ಮತ್ತು ವಿಶೇಷ ಕಾಳಜಿ ವಹಿಸುವ ವೈದ್ಯರ ನೇತೃತ್ವವಿದೆ. ಆಸ್ಪತ್ರೆಯಲ್ಲಿ ವಿಶೇಷವಾಗಿ ಹೊಲಿಗೆ ರಹಿತ ಫೆಕೊ ಪೊರೆ ಶಸ್ತ್ರಚಿಕಿತ್ಸೆ, ರೆಟಿನ, ಲೇಸರ್ ಸೌಲಭ್ಯಗಳು, ಮೆಳ್ಳೆಗಣ್ಣು ಶಸ್ತ್ರಚಿಕಿತ್ಸೆ, ಗ್ಲುಕೋಮಾ ಸೌಲಭ್ಯಗಳು, ಕಣ್ಣಿನ ಪ್ಲಾಸ್ಟಿಕ್ ಸರ್ಜರಿ, ಪ್ಲೊರೊಸಿನ್ ಆಂಜಿಯೋಗ್ರಾಫಿ, ಓಸಿಟಿ ಹಾಗೂ ಕಂಪೂಟರೀಕೃತ ಅತ್ಯಾಧುನಿಕ ವ್ಯವಸ್ಥೆಗಳು ಇಲ್ಲಿವೆ.
ಸರಕಾರದ ವಿವಿಧ ಚಿಕಿತ್ಸಾ ಸೌಲಭ್ಯಗಳಾದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯ ಸರಕಾರಿ ನೌಕರರ ಯೋಜನೆಯನ್ನು ಅಳವಡಿಸಿಕೊಂಡು ಸೂಕ್ತ ಚಿಕಿತ್ಸೆ ನೀಡುತ್ತಿದೆ. ವಿ.ಎಸ್.ಎನ್.ಎಲ್ ಉದ್ಯೋಗಿಗಳ ಯೋಜನೆ, ಮೆಡಿ ಅಸಿಸ್ಟ್ ಟಿಪಿಎ ಪ್ರೈ.ಲಿ, ವಿಡಾಲ್ ಇನ್ಶೂರೆನ್ಸ್ ಟಿಪಿಎ ಪ್ರೈ.ಲಿ ಬಜಾಜ್ ಅಲೈಯನ್ಸ್ ಇನ್ಶೂರೆನ್ಸ್, ಯುನೈಟೆಡ್ ಹೆಲ್ತ್ ಕೇರ್ ಮೊದಲಾದ ಯೋಜನೆಗಳನ್ನು ಅಳವಡಿಸಿಕೊಂಡಿದೆ.
ಪ್ರಸ್ತುತ ಕುಂದಾಪುರದಲ್ಲಿಯೂ ನೂತನ ಶಾಖೆ ಕಾರ್ಯಾರಂಭ ಮಾಡಿದ್ದು, ಕಣ್ಣಿಗೆ ಸಂಬಂಧಪಟ್ಟ ಎಲ್ಲಾ ಸೌಲಭ್ಯಗಳ ಜೊತೆಗೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.