ಅಫ್ಘಾನಿಸ್ತಾನವು ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಒಂದರ ನಂತರ ಇನ್ನೊಂದರಂತೆ ಎರಡು ಪಂದ್ಯಗಳನ್ನು ಆಡಿದೆ. ಮೊಹಮ್ಮದ್ ನಬಿ ನೇತೃತ್ವದ ತಂಡಕ್ಕೆ ಫಲಿತಾಂಶವು ಒಂದೇ ಆಗಿದ್ದರೂ, ವೀಕ್ಷಕರ ಗ್ಯಾಲರಿಯ ದೃಶ್ಯಗಳು ಮಾತ್ರ ಬೇರೆ ಬೇರೆಯಾಗಿವೆ.
ಅಫ್ಘಾನಿಸ್ತಾನವು ಪಾಕಿಸ್ತಾನದ ವಿರುದ್ಧ ಕೇವಲ 1 ವಿಕೆಟ್ನಿಂದ ಸೋತಿತ್ತು. ಅದೆ ಭಾರತದ ವಿರುದ್ದ ಕೊನೆಯ ಸೂಪರ್ 4 ಘರ್ಷಣೆಯಲ್ಲಿ 101 ರನ್ಗಳಿಂದ ಆಲೌಟ್ ಆಗಿತ್ತು.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ಮಧ್ಯದಲ್ಲೇ ಈ ಎರಡೂ ದೇಶಗಳ ಅಭಿಮಾನಿಗಳು ಹೊಯ್-ಕೈ ಮಾರಾಮಾರಿ ಮಾಡಿಕೊಂಡದ್ದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಇದಕ್ಕೆ ಸಂಪೂರ್ಣ ವಿರುದ್ದವಾಗಿ ಭಾರತದ ವಿರುದ್ಧ ಅಫ್ಘಾನಿಸ್ತಾನದ ಪಂದ್ಯವು ಅತ್ಯಂತ ಶಾಂತಿಯುತವಾಗಿತ್ತು ಮಾತ್ರವಲ್ಲದೆ ಅಭಿಮಾನಿಗಳು ಸ್ನೇಹಿತರಂತೆ ಹೆಗಲಿಗೆ ಕೈ ಹಾಕಿಕೊಂಡು ಎರಡೂ ದೇಶದ ಅಭಿಮಾನಿಗಳು ಪಂದ್ಯವನ್ನು ಆನಂದಿಸಿದರು.
ಅಫ್ಘಾನಿಸ್ತಾನ-ಪಾಕಿಸ್ತಾನ ಘರ್ಷಣೆಯ ನಂತರ ಅಭಿಮಾನಿಗಳು ಶಾರ್ಜಾ ಸ್ಟೇಡಿಯಂ ಅನ್ನು ಧ್ವಂಸಗೊಳಿಸಿದ ಮತ್ತು ಬೆಂಬಲಿಗರ ನಡುವೆ ನಡೆದ ಹೊಡೆದಾಟದ ವೀಡಿಯೊಗಳು ಮತ್ತು ಚಿತ್ರಗಳು ವೈರಲ್ ಆಗಿದ್ದವು. ಆದರೆ ಮರುದಿನ ಸ್ಟ್ಯಾಂಡ್ನ ಚಿತ್ರಣವು ಸಂಪೂರ್ಣವಾಗಿ ಭಿನ್ನವಾಗಿದ್ದು, ಭಾರತ ಮತ್ತು ಅಫ್ಘಾನ್ ಅಭಿಮಾನಿಗಳು ತಮ್ಮ ಸ್ನೇಹವನ್ನು ಆಚರಿಸುತ್ತಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
Spirit of brotherhood. Afghan and Indian fans during #AFGvsIND cricket match. 🇦🇫🇮🇳 pic.twitter.com/UweUaAwUwi
— Habib Khan (@HabibKhanT) September 9, 2022