ಸೆ. 10 ರಂದು ಕಸ ಸಂಗ್ರಹಣೆ ಇಲ್ಲ

ಉಡುಪಿ: ಉಡುಪಿ ನಗರಸಭೆಯ ಎಲ್ಲಾ ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಸೆಪ್ಟಂಬರ್ 10 ರಂದು ಕ್ರೀಡಾಕೂಟವನ್ನು ಆಯೋಜಿಸಲಾಗಿರುವುದರಿಂದ ಸದರಿ ದಿನದಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಮಾಡಲಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಸಜ್ಜಾದ ಕಾರವಾನ್ ಮಾದರಿ ಕಂಟೇನರ್ ಗಳು

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು, ಇದಕ್ಕಾಗಿ ಕಂಟೇನರ್ ಗಳನ್ನು ಬೆಡ್ ರೂಂ ಮಾದರಿ ವಿನ್ಯಾಸಗೊಳಿಸಲಾಗಿದೆ. ಈ ಎಲ್ಲಾ ಕಂಟೆನರ್ ಗಳನ್ನು ಹಗಲು ಹೊತ್ತಿನಲ್ಲಿ ಒಂದೆಡೆ ನಿಲ್ಲಿಸಲಾಗುತ್ತದೆ. ಈ ಹೊತ್ತಿನಲ್ಲಿ ಇದೊಂದು ಸಣ್ಣ ಹಳ್ಳಿಯಂತೆ ಕಾಣುತ್ತದೆ. ಸುಮಾರು 60 ಟ್ರಕ್ ಗೆ ಆರೋಹಿಸಲಾದ ಕಂಟೈನರ್ ವ್ಯಾನ್‌ಗಳು ಹವಾನಿಯಂತ್ರಿತ ಮಲಗುವ ಕೋಣೆಗಳಾಗಿ ಮಾರ್ಪಟ್ಟಿವೆ. ಮುಂದಿನ ಐದು ತಿಂಗಳವರೆಗಿನ ರಾಹುಲ್ ಗಾಂಧಿ ಯಾತ್ರೆಯಲ್ಲಿ ಇವು ಭಾರತದಾದ್ಯಂತ ಚಲಿಸಲಿವೆ. ಕಂಟೈನರ್‌ಗಳನ್ನು ಅದರಲ್ಲಿರುವ […]

ಸೆಪ್ಟಂಬರ್ 11 ರಂದು ಅರಣ್ಯ ಹುತಾತ್ಮರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

ಉಡುಪಿ: ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ, ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಹಾಗೂ ರಕ್ತನಿಧಿ ಕೇಂದ್ರ ಜಿಲ್ಲಾ ಸರಕಾರಿ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಅರಣ್ಯ ಹುತಾತ್ಮರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಸೆಪ್ಟಂಬರ್ 11 ರಂದು ಬೆಳಗ್ಗೆ 10 ಗಂಟೆಗೆ ನಗರದ ಬ್ರಹ್ಮಗಿರಿಯ ಐ.ಎಮ್.ಎ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಬಿಲ್ಲವ ಅಧ್ಯಕ್ಷತೆ ವಹಿಸಲಿದ್ದಾರೆ. […]

ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ ಕುರಿತು ಯಕ್ಷಗಾನ ಪ್ರದರ್ಶನ

ಉಡುಪಿ: ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಜಿಲ್ಲೆ, ಗ್ರಾಮ ಪಂಚಾಯತ್‌ಗಳು ಹಾಗೂ ಪಟ್ಟಣ ಪಂಚಾಯತ್ ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ ಕುರಿತು ಉಡುಪಿಯ ಶಶಿಚಂದ್ರ ಯಕ್ಷ ಬಳಗದ ವತಿಯಿಂದ ಈ ಕೆಳಕಂಡ ಸ್ಥಳಗಳಲ್ಲಿ ಯಕ್ಷಗಾನದ ಮೂಲಕ ಅರಿವು ಕಾರ್ಯಕ್ರಮ ನಡೆಯಲಿದೆ. ಸೆಪ್ಟಂಬರ್ 13 ರಂದು ಸಂಜೆ 4.30 ಕ್ಕೆ ಕರ್ಜೆ ಗದ್ದುಗೆ ದೇವಸ್ಥಾನದ […]

ಪಾಕ್ ಅಭಿಮಾನಿಗಳ ಜೊತೆ ಮಾರಾಮಾರಿ; ಭಾರತದ ಜೊತೆ ದೋಸ್ತಿ ಯಾರಿ: ಇದು ಅಫ್ಘಾನ್ ಕ್ರಿಕೆಟ್ ಅಭಿಮಾನಿಗಳ ಭಾರತ ಪ್ರೇಮ!

ಅಫ್ಘಾನಿಸ್ತಾನವು ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಒಂದರ ನಂತರ ಇನ್ನೊಂದರಂತೆ ಎರಡು ಪಂದ್ಯಗಳನ್ನು ಆಡಿದೆ. ಮೊಹಮ್ಮದ್ ನಬಿ ನೇತೃತ್ವದ ತಂಡಕ್ಕೆ ಫಲಿತಾಂಶವು ಒಂದೇ ಆಗಿದ್ದರೂ, ವೀಕ್ಷಕರ ಗ್ಯಾಲರಿಯ ದೃಶ್ಯಗಳು ಮಾತ್ರ ಬೇರೆ ಬೇರೆಯಾಗಿವೆ. ಅಫ್ಘಾನಿಸ್ತಾನವು ಪಾಕಿಸ್ತಾನದ ವಿರುದ್ಧ ಕೇವಲ 1 ವಿಕೆಟ್‌ನಿಂದ ಸೋತಿತ್ತು. ಅದೆ ಭಾರತದ ವಿರುದ್ದ ಕೊನೆಯ ಸೂಪರ್ 4 ಘರ್ಷಣೆಯಲ್ಲಿ 101 ರನ್‌ಗಳಿಂದ ಆಲೌಟ್ ಆಗಿತ್ತು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ಮಧ್ಯದಲ್ಲೇ ಈ ಎರಡೂ ದೇಶಗಳ ಅಭಿಮಾನಿಗಳು ಹೊಯ್-ಕೈ […]