ತೆಂಕನಿಡಿಯೂರು: ಸಹಾಯ ಸೌಹಾರ್ದ ಸಹಕಾರಿ ನಿಯಮಿತ ಇದರ ನೂತನ ಶಾಖೆ ಉದ್ಘಾಟನೆ

ಉಡುಪಿ: ಮಲ್ಪೆ ತೆಂಕನಿಡಿಯೂರಿನ ಬೃಂದಾವನ ಆರ್ಕೇಡ್ ನಲ್ಲಿ ಸಹಾಯ ಸೌಹಾರ್ದ ಸಹಕಾರಿ ನಿಯಮಿತ ಇದರ 3 ನೇ ಶಾಖೆಯ ಉದ್ಘಾಟನಾ ಸಮಾರಂಭವು ಶುಕ್ರವಾರದಂದು ನಡೆಯಿತು.

ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಇದ್ದಲ್ಲಿ ಮಾತ್ರ ಸಹಕಾರಿ ಕ್ಷೇತ್ರ ಬೆಳೆಯಲು ಸಾಧ್ಯ. ರಾಜ್ಯದಲ್ಲಿರುವ ಸಹಕಾರಿ ಸಂಸ್ಥೆಗಳು ಒಗ್ಗಟ್ಟಾಗಿ ಬಲಿಷ್ಠವಾಗಿ ಬೆಳೆಯುತ್ತಿದ್ದು ದೇಶಕ್ಕೆ ಮಾದರಿಯಾಗಿವೆ ಎಂದು ಹೇಳಿದರು.

ತೊಟ್ಟಂ ಸೈಂಟ್ ಆನ್ಸ್ ಚರ್ಚ್ ನ ಧರ್ಮಗುರು ವಂ.ಡೆನಿಸ್ ಡೆಸಾ ಆಶೀರ್ವಚನ ನೀಡಿದರು.

ಜಿಲ್ಲಾ ಕೋ.ಆ. ಯೂನಿಯನ್ ನ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಯವರು ಭದ್ರತಾ ಕೋಶ ವನ್ನು ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕ ಮಂಜುನಾಥ್ ಎಸ್.ಕೆ. ಗಣಕಯಂತ್ರವನ್ನು ಉದ್ಘಾಟಿಸಿದರು.

ಥೋಮಸ್ ಕರ್ನೇಲಿಯೋ, ಕ್ರಿಸ್ಟಿನ್ ಕರ್ನೇಲಿಯೋ, ಪೀಟರ್ ಡಿ’ಸೋಜಾ, ಕೆ.ಎನ್. ರಾಧಾಕೃಷ್ಣ ರಾವ್, ಸ್ಟ್ಯಾನಿ ಕರ್ನೇಲಿಯೋ, ಲೂಕ್ ಡಿ’ಸೋಜಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ಮುಗುಳು ತಜ್ಞ ಈಶ್ವರ್ ಮಲ್ಪೆ, ನಿತ್ಯಾನಂದ ಒಳಕಾಡು ಇವರನ್ನು ಸನ್ಮಾನಿಸಲಾಯಿತು.

ಸಹಾಯ ಸೌಹಾರ್ದದ ಅಧ್ಯಕ್ಷ ವಲೇರಿಯನ್ ಆರ್. ಫೆರ್ನಾಂಡಿಸ್ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿ ಹಾವಂಜೆ ನಿರೂಪಿಸಿದರು. ಸಿಇಓ ಮಾನಸ ಆರ್. ಮಧ್ಯಸ್ಥ ವಂದಿಸಿದರು.