ಉಡುಪಿ: ಪ್ರಸಕ್ತ ಸಾಲಿನಲ್ಲಿ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದನಾ ಘಟಕಗಳು ಮತ್ತು ವಿತರಣೆ
ಹಾಗೂ ಮಾರಾಟ ಕೇಂದ್ರಗಳು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಪರವಾನಗಿ ಪಡೆಯಲು ಮತ್ತು ನವೀಕರಿಸಿಕೊಳ್ಳಲು ಸೇವಾಸಿಂಧು ತಂತ್ರಾಂಶ sevasindhuservices.karnataka.gov.in ನಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.
ಜಿಲ್ಲೆಯ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದನೆ ಮತ್ತು ವಿತರಣೆ ಹಾಗೂ ಮಾರಾಟ ವ್ಯವಹಾರದಲ್ಲಿ
ತೊಡಗಿರುವವರು ಸೇವಾಸಿಂಧು ಕೇಂದ್ರಗಳನ್ನು ಮತ್ತು ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಿ ಪರವಾನಗಿ ಪಡೆದುಕೊಳ್ಳಬಹುದು ಹಾಗೂ ನವೀಕರಿಸಿಕೊಳ್ಳಬಹುದಾಗಿದೆ. ಪರವಾನಗಿ ಪಡೆಯದೇ ಇರುವ ಘಟಕಗಳ ವಿರುದ್ಧ ಕರ್ನಾಟಕ ಕುಕ್ಕುಟ ಮತ್ತು ಜಾನುವಾರು ಆಹಾರ ಕಾಯ್ದೆಯನ್ವಯ ಕ್ರಮವಹಿಸಲಾಗುವುದು ಎಂದು ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯ ಸೇವೆ, ಪಾಲಿ ಕ್ಲಿನಿಕ್, ಉಡುಪಿ ಇವರ ಪ್ರಕಟಣೆ ತಿಳಿಸಿದೆ.












