ದೊಡ್ಡಣ್ಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಕೋಟಿ ಗೀತಾಲೇಖನ ಯಜ್ಞ ಅಭಿಯಾನಕ್ಕೆ ಚಾಲನೆ

ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳ ಜಾಗತಿಕ ಮಟ್ಟದ ಆಧ್ಯಾತ್ಮಿಕ ಆಂದೋಲನ ಕೋಟಿ ಗೀತಾಲೇಖನ ಯಜ್ಞ ಸ೦ಕಲ್ಪ ಅಭಿಯಾನವು ಕ್ಷೇತ್ರದ ಧರ್ಮದರ್ಶಿ ಶ್ರೀರಮಾನಂದ ಗುರೂಜಿ ಲೇಖನ ದೀಕ್ಷ ಬದ್ಧರಾಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀ ಚಕ್ರಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ನೆರವೇರಿದ ಸರಳ ಸಮಾರಂಭದಲ್ಲಿ ಮಾತನಾಡಿದ ಶ್ರೀ ಗುರೂಜಿಯವರು, ಶ್ರೀಕೃಷ್ಣ ಪರಮಾತ್ಮನ ಮುಖಕಮಲದಿಂದ ಹೊರಹೊಮ್ಮಿದ ಭಗವಾನ್ ಶ್ರೀ ವೇದವ್ಯಾಸರಿಂದ ರಚಿಸಲ್ಪಟ್ಟ ಶ್ರೀಮದ್ಭಗವದ್ಗೀತೆಯನ್ನು […]

ಕಾರ್ಕಳ: ಎಂಪಿಎಂ‌ ಕಾಲೇಜಿನಲ್ಲಿ ಮಹಿಳಾ ಆರೋಗ್ಯ ಕುರಿತು ಮಾಹಿತಿ ಕಾರ್ಯಕ್ರಮ

ಕಾರ್ಕಳ: ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕಾದರೆ ಆರೋಗ್ಯ ಅತೀ ಮುಖ್ಯ. ಉತ್ತಮವಾದ ಪೌಷ್ಠಿಕಾಂಶಪುಳ್ಳ ಆಹಾರದ ಸೇವನೆಯಿಂದ ಮಹಿಳೆಯರ ಆರೋಗ್ಯ ಸುಸ್ಥತಿಯಲ್ಲಿರುತ್ತದೆ ಎಂದು ಹಿರ್ಗಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಶಮಾ ಸುಕುರ್ ಹೇಳಿದರು. ಅವರು ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗಸ್ಟ್11 ರಂದು ಲೈಂಗಿಕ ಕಿರುಕುಳ ವಿರೋಧಿ ಸಮಿತಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿ ಮತ್ತು ಕಾಲೇಜಿನ ಆರೋಗ್ಯ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮಹಿಳಾ ಆರೋಗ್ಯದ ಕುರಿತಾದ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ […]

ವಿಶ್ವ ಅಂಗದಾನ ದಿನಾಚರಣೆ: ಅಂಗದಾನದ ಮಹತ್ವ ತಿಳಿಸಲು ರೋಟರಿ ಕ್ಲಬ್ ವತಿಯಿಂದ ವಾಹನ ಜಾಥಾ

ಮಣಿಪಾಲ: ವಿಶ್ವ ಅಂಗದಾನ ದಿನಾಚರಣೆ ಅಂಗವಾಗಿ ಆಗಸ್ಟ್ 13 ಶನಿವಾರದಂದು ಸಂಜೆ 4 ರಿಂದ 6 ಗಂಟೆಯವರೆಗೆ ವಾಹನ ಜಾಥಾ ನಡೆಯಲಿದೆ. ರೋಟರಿ ವಲಯ 4ರ ಹತ್ತು ಕ್ಲಬ್ ಗಳಾದ ಪೆರ್ಡೂರು, ಪರ್ಕಳ, ಐಸಿರಿ ಪರ್ಕಳ, ಮಣಿಪಾಲ ಟೌನ್, ಮಣಿಪಾಲ, ಮಣಿಪಾಲ ಹಿಲ್ಸ್, ಉಡುಪಿ, ಉಡುಪಿ ರೋಯಲ್, ಉದ್ಯಾವರ ಮತ್ತು ಕಟಪಾಡಿಯ ಸದಸ್ಯರು ತಮ್ಮ ತಮ್ಮ ಪ್ರದೇಶದಿಂದ ಕಾರಿನಲ್ಲಿ ಜೋಡುಕಟ್ಟೆಯಿಂದ ಉಡುಪಿಗೆ ಬರಲಿರುವರು. ಉಡುಪಿಯಿಂದ ಮಣಿಪಾಲ ಟೈಗರ್ ಸರ್ಕಲ್ ವರೆಗಿನ ಕಾರು ಮತ್ತು ಬೈಕ್ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಶ್ರೀಮತಿ […]

ಪರವಾನಗಿ ಇಲ್ಲದ ಜಾನುವಾರು ಆಹಾರ ಉತ್ಪಾದನಾ ಮತ್ತು ಮಾರಾಟ ಘಟಕಗಳ ವಿರುದ್ದ ಕ್ರಮ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದನಾ ಘಟಕಗಳು ಮತ್ತು ವಿತರಣೆ ಹಾಗೂ ಮಾರಾಟ ಕೇಂದ್ರಗಳು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಪರವಾನಗಿ ಪಡೆಯಲು ಮತ್ತು ನವೀಕರಿಸಿಕೊಳ್ಳಲು ಸೇವಾಸಿಂಧು ತಂತ್ರಾಂಶ sevasindhuservices.karnataka.gov.in ನಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ. ಜಿಲ್ಲೆಯ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದನೆ ಮತ್ತು ವಿತರಣೆ ಹಾಗೂ ಮಾರಾಟ ವ್ಯವಹಾರದಲ್ಲಿ ತೊಡಗಿರುವವರು ಸೇವಾಸಿಂಧು ಕೇಂದ್ರಗಳನ್ನು ಮತ್ತು ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಿ ಪರವಾನಗಿ ಪಡೆದುಕೊಳ್ಳಬಹುದು ಹಾಗೂ ನವೀಕರಿಸಿಕೊಳ್ಳಬಹುದಾಗಿದೆ. ಪರವಾನಗಿ ಪಡೆಯದೇ ಇರುವ […]

ಧ್ವಜ ಸಂಹಿತೆಯ ಅನುಸಾರ ಮಸೀದಿ-ಮದ್ರಸಾಗಳಲ್ಲಿ ಧ್ವಜ ಹಾರಿಸಿ: ಜಿಲ್ಲಾ ವಕ್ಫ್ ಸಲಹಾ ಸಮಿತಿ ಕರೆ

ಉಡುಪಿ: ಜಿಲ್ಲಾ ಮಟ್ಟದ ಆಜಾದೀ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿರುವ ಎಲ್ಲಾ ಮಸೀದಿ ಮತ್ತು ಮದ್ರಸಾಗಳಲ್ಲಿ ಧ್ವಜ ಸಂಹಿತೆಯ ಅನುಸಾರವೆ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಹಾಗೂ ರಾಷ್ಟ್ರಧ್ವಜಕ್ಕೆ ಅಗೌರವ ಉಂಟಾಗದಂತೆ ಕ್ರಮವಹಿಸುವಂತೆ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿಗಳಿಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಸಿ.ಹೆಚ್. ಅಬ್ದುಲ್ ಮುತ್ತಾಲಿ ತಿಳಿಸಿರುತ್ತಾರೆ.