ಕೊಡವೂರು 20ನೆಯ ಬೃಹತ್ ಗ್ರಾಮ ಸಭೆ: ಸರ್ಕಾರದ ಸವಲತ್ತುಗಳ ಮಾಹಿತಿ ಮತ್ತು ಕುಂದು ಕೊರತೆ ನಿವಾರಣಾ ಕಾರ್ಯಕ್ರಮ

ಜುಲೈ 24 ರಂದು ಮಧ್ಯಾಹ್ನ 3:30 ರಿಂದ 5:30 ರವರೆಗೆ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಇಲ್ಲಿ 75 ನೆಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರಸಭೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸವಲತ್ತುಗಳ ಸಮಗ್ರ ಮಾಹಿತಿ ಕಾರ್ಯಕ್ರಮ ಹಾಗೂ ಊರಿನ ಕುಂದು ಕೊರತೆಗಳ ನಿವಾರಣೆಗಾಗಿ 20ನೆಯ ಬೃಹತ್ ಗ್ರಾಮ ಸಭೆ ನಡೆಯಲಿರುವುದು. ಅಂದು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಮತ್ತು ಫಲಾನುಭವಿಗಳಿಗೆ ಯೋಜನಾ ಸೌಲಭ್ಯಗಳನ್ನು ದೊರಕಿಸಿಕೊಡಲಾಗುವುದು ಎಂದು ಕೊಡವೂರು ವಾರ್ಡ್ ನ ನಗರಸಭಾ ಸದಸ್ಯ ವಿಜಯ್ ಕೊಡವೂರು ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಕಿರು ಸಾಲ ಸೌಲಭ್ಯ: ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್,
ವೋಟರ್ ಕಾರ್ಡ್,
ಪಾನ್ ಕಾರ್ಡ್,
ಬ್ಯಾಂಕ್ ಪಾಸ್ ಬುಕ್,
ಫೋಟೋ 2

ಅಡುಗೆ ಅನಿಲ ಇಲ್ಲದ ಬಿಪಿಎಲ್ ಕುಟುಂಬಕ್ಕೆ ಉಚಿತ ಅಡುಗೆ ಅನಿಲ ಸಂಪರ್ಕ ಯೋಜನೆ: ಬೇಕಾಗುವ ದಾಖಲೆಗಳು:
ಸದಸ್ಯರ ಆಧಾರ್ ಕಾರ್ಡ್,
ರೇಷನ್ ಕಾರ್ಡ್,
ಬ್ಯಾಂಕ್ ಪಾಸ್ ಬುಕ್,
ಫೋಟೋ 2

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್: ಬೇಕಾಗುವ ದಾಖಲೆಗಳು:

ಬಿಪಿಎಲ್ ಕಾರ್ಡ್,
ಆಧಾರ್ ಕಾರ್ಡ್,
ಕರೆಂಟ್ ಬಿಲ್,
ಬ್ಯಾಂಕ್ ಪಾಸ್ ಬುಕ್,
ಜಾತಿ ಪ್ರಮಾಣ ಪತ್ರ,
ವೋಟರ್ ಕಾರ್ಡ್,
ಫೋಟೋ 1,

ಆಯುಶ್ಮಾನ್ ಭಾರತ್ ಆರೋಗ್ಯ ಕಾರ್ಡ್: ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತ ನೀರು / ವಿದ್ಯುತ್ ಜೋಡಣೆ / ಮತ್ತು ಇತರ ಯೋಜನೆಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತ ಆರೋಗ್ಯ ಕಾರ್ಡ್: ಬೇಕಾಗುವ ದಾಖಲೆಗಳು:
ನವೀಕರಣಕ್ಕಾಗಿ ಹಳೆಯ ಆರೋಗ್ಯ ಕಾರ್ಡ್ ಪ್ರತಿ. ಹೆಸರನ್ನು ಸೇರಿಸಲು ಮತ್ತು ಹೆಸರನ್ನು ತೆಗೆಯಲು
ಮರಣ ಪ್ರಮಾಣ ಪತ್ರ. ಹೊಸ ಕಾರ್ಡಿಗಾಗಿ ರೇಷನ್ ಕಾರ್ಡ್, ಎಲ್ಲರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

ವಸತಿ ಯೋಜನೆ / ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ / ಸಾಧನ ಸಲಕರಣೆ ಮತ್ತು ಇನ್ನಿತರ ಯೋಜನೆಗಳ ಸಮಗ್ರ ಮಾಹಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
8660984279.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ನಗರಸಭಾ ಸದಸ್ಯ ವಿಜಯ್ ಕೊಡವೂರು ವಿನಂತಿಸಿದ್ದಾರೆ.