ತ್ರಿಶಾ ಕ್ಲಾಸಸ್: ಜುಲೈ 24 ರಿಂದ ಸಿಎ ಫೌಂಡೇಶನ್ ಆನ್ಲೈನ್ ತರಗತಿಗಳು ಆರಂಭ

ಉಡುಪಿ: ಕಳೆದ ಹಲವಾರು ವರ್ಷಗಳಿಂದ ವಾಣಿಜ್ಯ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಉಡುಪಿ, ಮಂಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಹೊಂದಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಫೌಂಡೇಶನ್ ಆನ್ಲೈನ್ ಕ್ಲಾಸಸ್ ಗಳು ಆರಂಭವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ 24 ವರ್ಷಗಳ ಅನುಭವವಿರುವ ಈ ಸಂಸ್ಥೆಯು ಅಧ್ಯಕ್ಷ, ಸಿಎ ಗೋಪಾಲ ಕೃಷ್ಣ ಭಟ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.

ತರಗತಿಯ ವಿಶೇಷತೆಗಳು:
• ಅಭ್ಯಾಸದ ನೂತನ ವಿಧಾನಗಳು
• ರಾಷ್ಟ್ರದ ಬೇರೆ ಬೇರೆ ಭಾಗದ ಪ್ರಸಿದ್ದ ಮತ್ತು ಅನುಭವೀ ವಿಷಯ ತಜ್ಞರು
• ಎಲ್ಲಾ ಸ್ಟಡೀ ಮೆಟಿರಿಯಲ್ ಗಳು ವಿದ್ಯಾರ್ಥಿಗಳಿಗೆ ದೊರಕಲಿದೆ
• ಲೈವ್ ಹಾಗೂ ರೆಕಾರ್ಡೆಡ್ ತರಗತಿಗಳು ಲಭ್ಯ
• ಪರೀಕ್ಷೆಗೆ ಪೂರಕವಾಗಿ ಪ್ರಶ್ನೆ ಪತ್ರಿಕೆಗಳನ್ನ ಉತ್ತರಿಸುವ ವಿಧಾನವನ್ನು ಕೂಡ ಇಲ್ಲಿ ತಿಳಿಸಿಕೊಡಲಾಗುತ್ತದೆ

ಜುಲೈ 25 ರಿಂದ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್ ಕ್ಲಾಸಸ್ ಗಳು ಆನ್ಲೈನ್ ಮೂಲಕ ಆರಂಭವಾಗಲಿದೆ. ಇದರ ಬಗ್ಗೆ ತಿಳಿಸುವ ಸಲುವಾಗಿ ಜುಲೈ 24 ರಂದು ಬೆಳಗ್ಗೆ ಗಂಟೆ 10 ರಿಂದ 12 ಗಂಟೆಯವರೆಗೆ ಆನ್ಲೈನ್ ಮೂಲಕ ಮಾಹಿತಿ ಕಾರ್ಯಗಾರ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತ್ರಿಶಾ ಸಂಸ್ಥೆಯನ್ನು ಸಂಪರ್ಕಿಸಬಹುದು.