ಸಿ.ಎ ಅಂತಿಮ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾರ್ಥಿಗಳ ಸಾಧನೆ

ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜೂನ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ಸಿಪಿಟಿ ಮತ್ತು ಐಪಿಸಿಸಿ ತರಬೇತಿ ಪಡೆದ ವಿದ್ಯಾರ್ಥಿಗಳು ಪರೀಕ್ಷೆ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ವಿವರ:
1. ಉಡುಪಿಯ ಗುಜ್ಜಾಡಿ ಪ್ರದೀಪ್ ನಾಯಕ್. ಇವರು ಗುಜ್ಜಾಡಿ ಪ್ರಭಾಕರ ನರಸಿಂಹ ನಾಯಕ್ ಇವರ ಬಳಿ ಆರ್ಟಿಕಲ್ಶಿಪ್ ಪೂರೈಸಿದ್ದಾರೆ. ಇವರು ಮಾರ್ಪಳ್ಳಿಯ ಗುಜ್ಜಾಡಿ ವೈಕುಂಠ ನರಸಿಂಹ ನಾಯಕ್ ಮತ್ತು ರಾಧಿಕಾ ನಾಯಕ್ ದಂಪತಿಯ ಪುತ್ರರಾಗಿದ್ದಾರೆ.

2. ಮೂಡಬಿದಿರೆಯ ಅಶ್ವಿನೀ ಶೆಣೈ. ಪ್ರಸ್ತುತ ಇವರು ಮಂಗಳೂರಿನ ಲೆಕ್ಕಪರಿಶೋಧಕರಾದ ಎಂ.ಜಗನ್ನಾಥ ಕಾಮತ್ ಮತ್ತು ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ನಡೆಸುತ್ತಿದ್ದು, ಇವರು ತ್ರಿಶಾ ಸಂಧ್ಯಾ ಕಾಲೇಜು ಮಂಗಳೂರಿನ ವಿದ್ಯಾರ್ಥಿನಿಯಾಗಿದ್ದು, ಮೂಡಬಿದಿರೆಯ ದಿವಾಕರ ಶೆಣೈ ಮತ್ತು ಕಾಂತಿ ಶೆಣೈ ದಂಪತಿಯ ಪುತ್ರಿಯಾಗಿದ್ದಾರೆ.

3. ಮಂಗಳೂರಿನ ಮಂದಾರ ಪಿ ಶೆಟ್ಟಿ. ಇವರು ಮಂಗಳೂರಿನ ಎ.ಪಿ.ಎಸ್.ಬಿ ಮತ್ತು ಅಸ್ಸೋಸಿಯೇಶನ್ಸ್ ನಲ್ಲಿ ಆರ್ಟಿಕಲ್ಶಿಪ್ ನಡೆಸುತ್ತಿದ್ದು, ಇವರು ಮಂಗಳೂರಿನ ಪ್ರಕಾಶ್ಚಂದ್ರ ಬಿ. ಶೆಟ್ಟಿ ಮತ್ತು ತುಷಾರ ಪಿ.ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.

4. ಉಡುಪಿಯ ಕಟಪಾಡಿಯ ಅಭಿಜಿತ್ ಸಾಲ್ಯಾನ್. ಇವರು ಉಡುಪಿಯ ಲೆಕ್ಕಪರಿಶೋಧಕರಾದ ಗಣೇಶ್ ಮತ್ತು ಸುಧೀರ್ ಅವರಲ್ಲಿ ಆರ್ಟಿಕಲ್ಶಿಪ್ ಮುಗಿಸಿದ್ದು, ಇವರು ಕಟಪಾಡಿಯ ಶಂಕರ ಸಾಲ್ಯಾನ್ ಮತ್ತು ರತ್ನಾ ಸಾಲ್ಯಾನ್ ದಂಪತಿಯ ಪುತ್ರರಾಗಿರುತ್ತಾರೆ.

5. ಉಡುಪಿಯ ನೀಲಾವರದ ನಿಶ್ಮಿತಾ ಶೆಟ್ಟಿ. ಇವರು ಉಡುಪಿ ಹಾಗೂ ಬೆಂಗಳೂರಿನಲ್ಲಿ ಬಿ.ವಿ.ಸಿ.
ಮತ್ತು ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ಅನ್ನು ಪೂರೈಸಿದ್ದಾರೆ ಇವರು ನೀಲಾವರದ ರತ್ನಾಕರ ಶೆಟ್ಟಿ ಮತ್ತು ಉಷಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.

6. ಕುಂದಾಪುರದ ನೀಲೇಶ್ ಪ್ರಭು. ಇವರು ಗುಜ್ಜಾಡಿ ಪ್ರಭಾಕರ ನರಸಿಂಹ ನಾಯಕ್ ಇವರ ಬಳಿ ಆರ್ಟಿಕಲ್ಶಿಪ್ ಪೂರೈಸಿದ್ದಾರೆ. ಇವರು ಕುಂದಾಪುರದ ಬಿ.ನಾಗೇಶ್ ಪ್ರಭು ಮತ್ತು ಬಿ.ಸುನಂದ ಎನ್. ಪ್ರಭು ದಂಪತಿಯ ಪುತ್ರರಾಗಿದ್ದಾರೆ.

7. ಉಡುಪಿ ದೆಂದೂರ್ ಕಟ್ಟೆಯ ಟೀನಾ ಫ್ರೆಜಿ಼ಲ್ ಮೆಂಡೋನ್ಸಾ. ಇವರು ಉಡುಪಿಯ ಆಚಾರ್ಯ ಮತ್ತು ಡೆಸಾ ಇವರ ಬಳಿ ಆರ್ಟಿಕಲ್ಶಿಪ್ ಮುಗಿಸಿರುತ್ತಾರೆ. ಇವರು ದೆಂದೂರ್ ಕಟ್ಟೆಯ ಥಿಯೋಡೊ ಮೆಂಡೋನ್ಸಾ ಮತ್ತು ಫೆಲ್ಸಿ ಮೆಂಡೋನ್ಸಾ ದಂಪತಿಯ ಪುತ್ರಿಯಾಗಿದ್ದಾರೆ.