ಐಸಿಎಐಯ ಸಿ.ಎ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾರ್ಥಿಗಳ ಸಾಧನೆ

ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜೂನ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಫಿ಼ಯೋನಾ ಮೋನಿಸ್ ಮತ್ತು ಮಾರ್ವೆಲ್ ಕ್ರಿಸ್ಟನ್ ಡಿಸೋಜಾ಼ ಇವರುಗಳು ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಇವರಿಬ್ಬರೂ ಮಂಗಳೂರಿನ ಲೆಕ್ಕಪರಿಶೋಧಕರಾದ ಶ್ರೀರಾಮುಲು ನಾಯ್ಡು ಮತ್ತು ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ನಡೆಸುತ್ತಿದ್ದು, ಇವರು ಸಿಎಯ ಎರಡು ಹಂತದ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಹಾಗೂ ಅಂತಿಮ ಹಂತದ ತರಬೇತಿಯನ್ನು ಆನ್ ಲೈನ್ ಮೂಲಕ ಪಡೆದಿರುತ್ತಾರೆ. ಉಡುಪಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪೂರೈಸಿರುತ್ತಾರೆ. ಫಿಯೋನಾ ಉಡುಪಿಯ ಮೆಲ್ವಿನ್ ಮೋನಿಸ್ ಮತ್ತು ನವೀನಾ ಮೋನಿಸ್ ದಂಪತಿಯ ಪುತ್ರಿ. ಮಾರ್ವೆಲ್ ಉಡುಪಿಯ ಮಾರ್ಸೆಲ್ ಡಿಸೋಜಾ಼ ಮತ್ತು ಜಾನೆಟ್ ಡಿಸೋಜಾ಼ ದಂಪತಿಯ ಪುತ್ರ.

ಫಿ಼ಯೋನಾ ಮೋನಿಸ್
ಮಾರ್ವೆಲ್ ಕ್ರಿಸ್ಟನ್ ಡಿಸೋಜಾ಼