ಕಾರ್ಕಳ: ಹಿರಿಯಂಗಡಿ – ಕುಂಟಲ್ಪಾಡಿಯಲ್ಲಿ ಹಿಂದೂ ಜಾಗರಣ ವೇದಿಕೆ, ಅಂಬಾಭವಾನಿ ಫ್ರೆಂಡ್ಸ್, ಚೇತಕ್ ಯುವಕ –ಯುವತಿ ಮಂಡಲ ಇದರ ಆಶ್ರಯದಲ್ಲಿ ಹಿಂದು ರುದ್ರಭೂಮಿ ಮುಕ್ತಿಧಾಮದ ಲೋಕಾರ್ಪಣೆ ಕಾರ್ಯಕ್ರಮ ಮೇ. 5ರಂದು ನಡೆಯಿತು. ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯಕುಮಾರ್ ಅವರು ಲೋಕಾರ್ಪಣೆಗೊಳಿಸಿ, ಹಿಂದೂ ರುದ್ರಭೂಮಿಯು ಊರಿನ ಶೃದ್ಧಾವಂತ ಹಿಂದೂಗಳ ಸದ್ಬಾವನೆಯ ಪ್ರತಿಕವಾಗಿದೆ. ಸಾವಿನ ನಂತರವು ಬದುಕಿದೆ ಎಂಬ ಹಿಂದೂ ಧಾರ್ಮಿಕ ನಂಬಿಕೆಯ ತಳಹದಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೋತಿಷಿ, ಶಿಕ್ಷಕರಾದ ಸುಬ್ರಹ್ಮಣ್ಯ ಆಚಾರ್ಯ ಅವರು ಮಾತನಾಡಿ, ಮೋಕ್ಷಮಾರ್ಗದ ಅದ್ಬುತಕಲ್ಪನೆ ಹಿಂದೂ ಧರ್ಮದ್ದು. ಸಾಂಸ್ಕೃತಿಕವಾಗಿ ಶ್ರೀಮಂತವಾದ ಹಿಂದೂ ಧರ್ಮದ ಷೋಡಶ ಸಂಸ್ಕಾರದ ತುದಿ ಬಿಂದುವಾದ ಮೋಕ್ಷಧಾಮವು ಶೃದ್ಧಾವಂತ ಹಿಂದೂ ಧರ್ಮಿಯರ ಸೇವಾಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದರು.
ವಿಕಸನ ತರಭೇತಿದಾರ ರಾಜೇಂದ್ರ ಭಟ್, ಶ್ರೀನಿವಾಸ ಪೈ, ಶ್ರೀಧರ ನಾಯಕ್, ಶಿವ ದೇವಾಡಿಗ, ಸತೀಶ್ ದೇವಾಡಿಗ, ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಗೋವಿಂದ ರಾವ್ ಪ್ರಸ್ತಾವನೆಗೈದರು. ಸತೀಶ್ ಪೂಜಾರಿ ಸ್ವಾಗತಿಸಿದರು. ರಾಜೇಶ್ ಕುಮಾರ್ ವಂದಿಸಿದರು.