ನವದೆಹಲಿ: ರಬಿ ಮಾರುಕಟ್ಟೆ ಋತು 2022-23 ರಲ್ಲಿ ಸರಕಾರವು ಇದುವರೆಗೆ 187 ಲಕ್ಷ 86 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಸಂಗ್ರಹಿಸಿದೆ. ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 37 ಸಾವಿರದ ಎಂಟುನೂರ ಐವತ್ತೆರಡು ಕೋಟಿಗೂ ಹೆಚ್ಚಾಗಿದ್ದು, ಸುಮಾರು 17 ಲಕ್ಷ 85 ಸಾವಿರ ರೈತರು ಇದರ ಪ್ರಯೋಜನ ಪಡೆದಿದ್ದಾರೆ.
ಖಾರಿಫ್ ಬೆಳೆ 755 ಲಕ್ಷ ಮೆಟ್ರಿಕ್ ಟನ್ ಮತ್ತು ರಬಿ ಬೆಳೆ 105 ಲಕ್ಷ ಮೆಟ್ರಿಕ್ ಟನ್ ಸೇರಿದಂತೆ 860 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಇದುವರೆಗೆ ಖರೀದಿಸಲಾಗಿದೆ. 1,68,720 ಕೋಟಿಗೂ ಹೆಚ್ಚಿನ ಬೆಂಬಲ ಬೆಲೆಯೊಂದಿಗೆ 125 ಲಕ್ಷಕ್ಕೂ ಹೆಚ್ಚು ರೈತರು ಲಾಭಾನ್ವಿತರಾಗಿದ್ದಾರೆ.