ನಾಯಿಮರಿಯಾಗಿದ್ದಾಗ ಪರಿತ್ಯಕ್ತಳಾಗಿದ್ದ ಸವನ್ನಾ ಎನ್ನುವ ನಾಯಿಯೊಂದು ಇವತ್ತು ಜಗತ್ತನ್ನೇ ಸುತ್ತಿದ ಮೊದಲ ನಾಯಿ ಎನ್ನುವ ಬಿರುದಿಗೆ ಪಾತ್ರವಾಗಿದೆ. ಈ ನಾಯಿಯ ಚಿತ್ರಗಳನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಜಗತ್ತಿನಾದ್ಯಂತದ ಶ್ವಾನ ಪ್ರೇಮಿಗಳು ಆನಂದತುಂದಿಲರಾಗಿದ್ದಾರೆ.
ಟ್ವಿಟರ್ ಹ್ಯಾಂಡಲ್ ವೀ ರೇಟ್ ಡಾಗ್ಸ್ ತನ್ನ ಇತ್ತೀಚಿನ ಪೋಸ್ಟ್ನಲ್ಲಿ ಈ ನಾಯಿಯ ಬಗ್ಗೆ ಪೋಸ್ಟ್ ಮಾಡಿದೆ.
ಇದು ಸವನ್ನಾ. ಈಕೆ ಅಧಿಕೃತವಾಗಿ ಭೂಗೋಳವನ್ನು ಸುತ್ತಿದ ಮೊದಲ ನಾಯಿ. ಅವಳು ನಾಯಿಮರಿಯಾಗಿ ಪರಿತ್ಯಕ್ತಳಾಗಿದ್ದಳು, ಈಗ ತನ್ನ ಮಾನವ ಜೊತೆಗಾರ ಟಾಮ್ನೊಂದಿಗೆ ಇಡೀ ಜಗತ್ತನ್ನು ಅನುಭವಿಸುತ್ತಿದ್ದಾಳೆ. ಈ ವಾರದ ಆರಂಭದಲ್ಲಿ ಅವರು ತಮ್ಮ 7 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದಾಗ ಅಭಿಮಾನಿಗಳೂ ಸೇರಿಕೊಂಡರು ಎಂದು ವೇ ರೇಟ್ ಡಾಗ್ಸ್ ಪೋಸ್ಟ್ ಮಾಡಿದೆ.
This is Savannah. She is officially the first dog to circumnavigate the globe. She went from being abandoned as a puppy, to experiencing the entire world with her human, Tom. Earlier this week they were joined by fans as they completed their 7-year journey. 14/10 historic as h*ck pic.twitter.com/7wqWAmDcAG
— WeRateDogs (@dog_rates) May 27, 2022