ವಿದ್ಯಾಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆಯಿಂದ ಕ್ಷಯರೋಗ ಹಾಗೂ ಇತರ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ಶಿಬಿರ

ಬ್ರಹ್ಮಾವರ : ಮೇ 26 ರಂದು ವಿದ್ಯಾಲಕ್ಷ್ಮಿ  ಸಮೂಹ ಶಿಕ್ಷಣ ಸಂಸ್ಥೆ ಹಾಗೂ  ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಕ್ಷಯರೋಗದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಯಿತು. ಬ್ರಹ್ಮಾವರ ತಾಲೂಕು  ಆರೋಗ್ಯ ಇಲಾಖೆಯ ಹಿರಿಯ ಮೇಲ್ವಿಚಾರಣಾಧಿಕಾರಿ ಡಾ. ಮಂಜುನಾಥ್ ವಿದ್ಯಾರ್ಥಿಗಳಿಗೆ ಕ್ಷಯರೋಗದ ಬಗ್ಗೆ ಜಾಗೃತಿ ಮತ್ತು ಅದರ ಕುರಿತಾದ ಮಾಹಿತಿಯನ್ನು ನೀಡಿದರು. ಶ್ರೀಮತಿ ರೇಷ್ಮಾ ಸಮುದಾಯ ಆರೋಗ್ಯ ಅಧಿಕಾರಿ ಹೆರೂರು, ಶ್ರೀಮತಿ ಸರೋಜಿನಿ ಸಮುದಾಯ ಆರೋಗ್ಯ ಅಧಿಕಾರಿ ಹಾರಾಡಿ, ಸಂಸ್ಥೆಯ ಸಂಚಾಲಕರಾದ  […]

ಒಂದು ಕಾಲದಲ್ಲಿ ಪರಿತ್ಯಕ್ತ ನಾಯಿಮರಿ: ಈಗ ‘ಜಗತ್ತನ್ನೇ ಸುತ್ತಿದ ಮೊದಲ ನಾಯಿ’! ಇದು ಒಂದು ನಾಯಿಯ ಕಥೆ

ನಾಯಿಮರಿಯಾಗಿದ್ದಾಗ ಪರಿತ್ಯಕ್ತಳಾಗಿದ್ದ ಸವನ್ನಾ ಎನ್ನುವ ನಾಯಿಯೊಂದು ಇವತ್ತು ಜಗತ್ತನ್ನೇ ಸುತ್ತಿದ ಮೊದಲ ನಾಯಿ ಎನ್ನುವ ಬಿರುದಿಗೆ ಪಾತ್ರವಾಗಿದೆ. ಈ ನಾಯಿಯ ಚಿತ್ರಗಳನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಜಗತ್ತಿನಾದ್ಯಂತದ ಶ್ವಾನ ಪ್ರೇಮಿಗಳು ಆನಂದತುಂದಿಲರಾಗಿದ್ದಾರೆ. ಟ್ವಿಟರ್ ಹ್ಯಾಂಡಲ್ ವೀ ರೇಟ್ ಡಾಗ್ಸ್ ತನ್ನ ಇತ್ತೀಚಿನ ಪೋಸ್ಟ್‌ನಲ್ಲಿ ಈ ನಾಯಿಯ ಬಗ್ಗೆ ಪೋಸ್ಟ್ ಮಾಡಿದೆ. ಇದು ಸವನ್ನಾ. ಈಕೆ ಅಧಿಕೃತವಾಗಿ ಭೂಗೋಳವನ್ನು ಸುತ್ತಿದ ಮೊದಲ ನಾಯಿ. ಅವಳು ನಾಯಿಮರಿಯಾಗಿ ಪರಿತ್ಯಕ್ತಳಾಗಿದ್ದಳು, ಈಗ ತನ್ನ ಮಾನವ ಜೊತೆಗಾರ ಟಾಮ್‌ನೊಂದಿಗೆ ಇಡೀ ಜಗತ್ತನ್ನು […]

ಭಯೋತ್ಪಾದನೆಯ ಪರ ವಕಾಲತ್ತು ಬೇಡ: ಅಂತರಾಷ್ಟ್ರೀಯ ಇಸ್ಲಾಮಿಕ್ ಸಹಕಾರ ಸಂಘಟನೆಗೆ ಭಾರತದ ಛಾಟಿ ಏಟು

ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ, ಲಕ್ಷಾಂತರ ಕಾಶ್ಮೀರಿ ಪಂಡಿತರ ನರಮೇಧ ಮತ್ತು ಪಲಾಯನಕ್ಕೆ ಕಾರಣನಾದ ಯಾಸಿನ್ ಮಲಿಕ್ ವಿರುದ್ಧದ ನ್ಯಾಯಾಲಯದ ತೀರ್ಪಿನ ವಿರುದ್ದ ನವದೆಹಲಿಯನ್ನು ಟೀಕಿಸಿದ ಇಸ್ಲಾಮಿಕ್ ಸಹಕಾರ ಸಂಘಟನೆ- ಸ್ವತಂತ್ರ ಶಾಶ್ವತ ಮಾನವ ಹಕ್ಕುಗಳ ಆಯೋಗದ ಟಿಪ್ಪಣಿಗಳನ್ನು ಭಾರತವು “ಸ್ವೀಕಾರಾರ್ಹವಲ್ಲ” ಎಂದು ಬಣ್ಣಿಸಿದೆ. ವಿಶ್ವವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಬಯಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ ಮತ್ತು ಯಾವುದೇ ರೀತಿಯಲ್ಲಿ ಅದನ್ನು ಸಮರ್ಥಿಸಬೇಡಿ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) […]

ವೀರ ಸಾವರ್ಕರ್ ಪಾತ್ರದಲ್ಲಿ ರಣದೀಪ್ ಹೂಡಾ: ಸಿನಿಮಾದ ಪೋಸ್ಟರ್ ಹಂಚಿಕೊಂಡ ನಟ

ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಜಯಂತಿಯಂದು ರಣದೀಪ್ ಹೂಡಾ ತಮ್ಮ ಮುಂಬರುವ ಚಿತ್ರ ಸ್ವತಂತ್ರ ವೀರ್ ಸಾವರ್ಕರ್ ಸಿನಿಮಾ ಪೋಸ್ಟರಿನ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ. ಭಾರತದ ಸ್ವಾತಂತ್ರ್ಯ ಮತ್ತು ಸ್ವಯಂ ವಾಸ್ತವೀಕರಣಕ್ಕಾಗಿ ಹೋರಾಡಿದ ಕೊಂಡಾಡಲ್ಪಡದ ದೇಶದ ಅತ್ಯುನ್ನತ ನಾಯಕನಿಗೆ ನಮಸ್ಕರಿಸುತ್ತೇನೆ. ನೈಜ ಕ್ರಾಂತಿಕಾರಿಯ ಅಂತಹ ದೊಡ್ಡ ಪಾದರಕ್ಷೆಗಳ ಒಳಗೆ ಕಾಲು ತೂರಿಸುವ ಸವಾಲನ್ನು ಸಮರ್ಥವಾಗಿ ಎದುರಿಸುವೆ ಎಂದು ನಂಬಿದ್ದೇನೆ ಮತ್ತು ಕಂಬಳಿಯ ಅಡಿಯಲ್ಲಿ ಹುದುಗಿಹೋಗಿರುವ ಅವರ ಸತ್ಯ ಕಥೆಗಳನ್ನು ಹೇಳಲಿದ್ದೇನೆ ಎಂದು ವೀರ […]

ಮತ್ತೆ ಹಿಜಾಬ್ ಗದ್ದಲ: 99.99% ಜನರು ತೀರ್ಪನ್ನು ಒಪ್ಪಿಕೊಂಡಿದ್ದಾರೆ, ವಿವಾದವನ್ನು ಬೆಳೆಸುವ ಅಗತ್ಯವಿಲ್ಲ: ಬೊಮ್ಮಾಯಿ

ಬೆಂಗಳೂರು: ಮತ್ತೆ ಮರುಜೀವ ಪಡೆದಿರುವ ಹಿಜಾಬ್ ಗದ್ದಲದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಷಯವನ್ನು ಬೆಳೆಸುವ ಅಗತ್ಯವಿಲ್ಲ, ನ್ಯಾಯಾಲಯವು ಈಗಾಗಲೇ ತೀರ್ಪು ನೀಡಿದೆ. ಎಲ್ಲರೂ ಅದನ್ನು ಅನುಸರಿಸುತ್ತಿದ್ದಾರೆ, 99.99% ತೀರ್ಪನ್ನು ಅನುಸರಿಸಿದ್ದಾರೆ. ನ್ಯಾಯಾಲಯ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. Karnataka CM Basavaraj Bommai on #HijabRow resurfacing, said, "There is no need of raising an issue. Court has already given its judgement. Everyone […]