ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಜಯಂತಿಯಂದು ರಣದೀಪ್ ಹೂಡಾ ತಮ್ಮ ಮುಂಬರುವ ಚಿತ್ರ ಸ್ವತಂತ್ರ ವೀರ್ ಸಾವರ್ಕರ್ ಸಿನಿಮಾ ಪೋಸ್ಟರಿನ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ.
ಭಾರತದ ಸ್ವಾತಂತ್ರ್ಯ ಮತ್ತು ಸ್ವಯಂ ವಾಸ್ತವೀಕರಣಕ್ಕಾಗಿ ಹೋರಾಡಿದ ಕೊಂಡಾಡಲ್ಪಡದ ದೇಶದ ಅತ್ಯುನ್ನತ ನಾಯಕನಿಗೆ ನಮಸ್ಕರಿಸುತ್ತೇನೆ. ನೈಜ ಕ್ರಾಂತಿಕಾರಿಯ ಅಂತಹ ದೊಡ್ಡ ಪಾದರಕ್ಷೆಗಳ ಒಳಗೆ ಕಾಲು ತೂರಿಸುವ ಸವಾಲನ್ನು ಸಮರ್ಥವಾಗಿ ಎದುರಿಸುವೆ ಎಂದು ನಂಬಿದ್ದೇನೆ ಮತ್ತು ಕಂಬಳಿಯ ಅಡಿಯಲ್ಲಿ ಹುದುಗಿಹೋಗಿರುವ ಅವರ ಸತ್ಯ ಕಥೆಗಳನ್ನು ಹೇಳಲಿದ್ದೇನೆ ಎಂದು ವೀರ ಸಾವರ್ಕರ್ ಸಿನಿಮಾದ ಪೋಸ್ಟರ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಸ್ವತಂತ್ರ ವೀರ್ ಸಾವರ್ಕರ್ ಜೀವನಾಧಾರಿತ ಚಿತ್ರದಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ರಣದೀಪ್ ಹೂಡಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಅವರು ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು, ಮೇ 28 ರಂದು ವೀರ್ ಸಾವರ್ಕರ್ ಅವರ 139 ನೇ ಜನ್ಮದಿನದಂದು ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸಲಿದ್ದಾರೆ.
 
								 
															





 
															 
															 
															











