ವಿರಾಟ್ ಕೊಹ್ಲಿ ಅವರು ತಮ್ಮ ಸಂಪೂರ್ಣ 14 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಮಾಡಿದ್ದಕ್ಕಿಂತ ಹೆಚ್ಚು ತಪ್ಪುಗಳನ್ನು ಒಂದು ಐಪಿಎಲ್ ಸೀಸನ್ನಲ್ಲಿ ಮಾಡಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚಿನ ಪಂದ್ಯಗಳಲ್ಲಿ ಇನ್ನಿಂಗ್ಸ್ ತೆರೆದರೂ, ಎರಡೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಶತಕವನ್ನು ಗಳಿಸದ ಕೊಹ್ಲಿ, 16 ಐಪಿಎಲ್ ಪಂದ್ಯಗಳಲ್ಲಿ 22.73 ರ ಸರಾಸರಿಗಿಂತ ಕಡಿಮೆ ಸರಾಸರಿಯಲ್ಲಿ 341 ರನ್ ಗಳಿಸಿ ಎರಡು ಅರ್ಧ ಶತಕಗಳನ್ನು ಗಳಿಸಿ ತಮ್ಮ ಕೆಟ್ಟ ಕುಸಿತವನ್ನು ಪ್ರದರ್ಶಿಸಿದ್ದಾರೆ.
“ಇದು ನಮಗೆ ಗೊತ್ತಿರುವ ವಿರಾಟ್ ಕೊಹ್ಲಿ ಅಲ್ಲ. ಈ ಋತುವಿನಲ್ಲಿ ಆಡುತ್ತಿರುವವುದು ವಿಭಿನ್ನ ವಿರಾಟ್ ಕೊಹ್ಲಿ. ಇಲ್ಲದಿದ್ದರೆ ಅವರು ಈ ಋತುವಿನಲ್ಲಿ ಮಾಡಿದಷ್ಟು ತಪ್ಪುಗಳನ್ನು, ತಮ್ಮ ಇಡೀ ವೃತ್ತಿಜೀವನದಲ್ಲೇ ಮಾಡಿಲ್ಲ” ಎಂದು ಸೆಹ್ವಾಗ್ ಕ್ರಿಕೆಟ್ ಬಝ್ ಗೆ ತಿಳಿಸಿದ್ದಾರೆ.
“ನೀವು ರನ್ ಗಳಿಸದಿದ್ದಾಗ ಇದು ಸಂಭವಿಸಬಹುದು. ಕೆಟ್ಟ ಪ್ಯಾಚ್ನಿಂದ ಹೊರಬರಲು ನೀವು ವಿವಿಧ ಆಯ್ಕೆಗಳನ್ನು ನೋಡಲು ಪ್ರಯತ್ನಿಸುತ್ತೀರಿ ಮತ್ತು ಅದು ನಿಮ್ಮನ್ನು ವಿವಿಧ ರೀತಿಯಲ್ಲಿ ಔಟ್ ಆಗುವಂತೆ ಮಾಡುತ್ತದೆ. ಈ ಋತುವಿನಲ್ಲಿ, ಕೊಹ್ಲಿ ಯೋಚಿಸಬಹುದಾದ ಎಲ್ಲಾ ರೀತಿಯಲ್ಲಿ ಔಟಾಗಿದ್ದಾರೆ” ಎಂದು ಎಲ್ಲಾ ಫಾರ್ಮ್ಯಾಟ್ಗಳಲ್ಲಿ17,000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ಗಳನ್ನು ಗಳಿಸಿರುವ ಸರ್ವಶ್ರೇಷ್ಟ ಆಟಗಾರ ಸೆಹ್ವಾಗ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕೊಹ್ಲಿಯ ಬಗ್ಗೆ ಸಹಾನುಭೂತಿ ಹೊಂದಿರುವ ಸೆಹ್ವಾಗ್ ಭಾರತದ ನಂ.1 ಬ್ಯಾಟರ್ ಕೊಹ್ಲಿ ವಿಭಿನ್ನ ತಂತ್ರಗಳನ್ನು ಪ್ರಯತ್ನಿಸುವ ಹತಾಶ ಪ್ರಯತ್ನದಲ್ಲಿ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಔಟ್ ಆಗಿದ್ದಾರೆ ಎಂದು ಬೇಸರಿಸಿದ್ದಾರೆ.