ಇಂದು ಉಡುಪಿಯಲ್ಲಿ ಜಗ್ಗಿ ವಾಸುದೇವ್ ಸದ್ಗುರುರವರ ಸ್ವಾಗತ ಕಾರ್ಯಕ್ರಮ

ಉಡುಪಿ: ಜಗತ್ತಿನಾದ್ಯಂತ ಶತಕೋಟಿ ಹೃದಯಗಳನ್ನು ಮುಟ್ಟಿದ ನಂತರ, ಭಾರತಕ್ಕೆ ಮರಳುತ್ತಿರುವ ಸದ್ಗುರುಗಳನ್ನು ಸ್ವಾಗತಿಸುವ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ಸಂಜೆ 4.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಕಾರ್ ಸ್ಟ್ರೀಟ್ ನಲ್ಲಿ ಜರುಗಲಿದೆ.

ಕಾರ್ಯಕ್ರಮದ ವಿವರಗಳು:

ಹೆಸರಾಂತ ಕಲಾವಿದ ಮಹೇಶ್ ರಾವ್ ಅವರಿಂದ ರಂಗೋಲಿ ಬಿಡಿಸುವ ಕಾರ್ಯಕ್ರಮ. ಶ್ರಾವ್ಯ ಹಿರಿಯಡ್ಕ ಶಿಷ್ಯರು ಮತ್ತು ಶ್ವೇತಾ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ. ಝೇಂಕಾರ್ ಟ್ರೂಪ್ ಎಸ್‌ಎಲ್‌ವಿಟಿಯಿಂದ ದಿವ್ಯ ಭಜನೆ. ಅರ್ಜುನ್ ಮತ್ತು ತಂಡದವರಿಂದ ಯಕ್ಷಗಾನ ಪ್ರದರ್ಶನ. ಪರ್ಕಳ ತಂಡದಿಂದ ಚೆಂಡೆ (ಸಾಂಪ್ರದಾಯಿಕ ಡೋಲು) ಪ್ರದರ್ಶನ ಹಾಗೂ ಇನ್ನೂ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟನೆ ತಿಳಿಸಿದೆ.

ಸ್ಥಳ: ಕಾರ್ ಸ್ಟ್ರೀಟ್, ಉಡುಪಿ, ಸಂಪೂರ್ಣ ಸ್ಟೋರ್ ಎದುರು.

ಸಮಯ: ಸಾಯಂಕಾಲ 4.30.