ಕಾಪು : ಸಮಾಜ ಸೇವಾ ಕ್ಷೇತ್ರದಲ್ಲಿ ರಾಷ್ಟೀಯ ಪ್ರಶಸ್ತಿ ಪುರಸ್ಕೃತರಾದ ಕಾಪು ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮೊಹಮ್ಮದ್ ಫಾರೂಕ್, ಚಂದ್ರನಗರದ ಜನಸಂಪರ್ಕ ಜನಸೇವಾ ವೇದಿಕೆಯ ಅಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಉಭಯ ವೇದಿಕೆ ಸಂಚಾಲರಾದ ದಿವಾಕರ ಡಿ. ಶೆಟ್ಟಿ ಕಳತ್ತೂರು ಇವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಕಳತ್ತೂರಿನಲ್ಲಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಉಪ ಕೇಂದ್ರಕ್ಕೆ 1000 ಲೀಟರ್ ನ ಕುಡಿಯುವ ನೀರಿನ ಟ್ಯಾಂಕ್ ಅನ್ನು ಕೊಡುಗೆಯಾಗಿ ಹಸ್ತಾಂತರಿಸಿದರು.
ಆರೋಗ್ಯ ಸುರಕ್ಷಾಧಿಕಾರಿ ಸುಧಾವತಿ ಮಾತನಾಡಿ, ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಕುಡಿಯುವ ನೀರಿನ ಟ್ಯಾಂಕ್ ನ ಅಗತ್ಯವಿತ್ತು ಎಂದರು. ಕೊಡುಗೆ ನೀಡಿ ಸಹಕರಿಸಿದ ಸಮಾಜ ಸೇವಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಕಳತ್ತೂರು ಸಮುದಾಯ ಆರೋಗ್ಯಾಧಿಕಾರಿ ದೀಪಿಕಾ ನಾಯಕ್, ಆಶಾ ಕಾರ್ಯಕರ್ತೆ ಸುಜಾತಾ ನಾಯ್ಕ್, ಅಂಗನವಾಡಿ ಕಾರ್ಯಕರ್ತೆ ಕಮಲಾಕ್ಷಿ, ಅಂಗನವಾಡಿ ಸಹಾಯಕಿ ಅನಿತಾ ನಾಯ್ಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.