ಎಪಿಸೋಡ್-1 ಕ್ಕೆ ಮನಸೋತ ವೀಕ್ಷಕರೆಲ್ಲಾ ಎಪಿಸೋಡ್ 2 ಗೂ ಫುಲ್ ಫಿದಾ!!
ಬರೋಬ್ಬರಿ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿರುವ ಯೂಟ್ಯೂಬ್ ಕಿರುಚಿತ್ರ ‘ಎಲ್ಲಿಂದ ಬರ್ತಿರೋ ನೀವೆಲ್ಲ?’- ಎಪಿಸೋಡ್-1 ಈಗಾಗಲೇ ಸಿನಿರಸಿಕರ ಮನ ಸೂರೆಗೊಂಡಿದೆ. ಎಪಿಸೋಡ್ 1ರಲ್ಲಿ ತಾರ್ಕಿಕ ಅಂತ್ಯ ಕಾಣದ ಸಿನಿಮಾ ಎಪಿಸೋಡ್ 2ರಲ್ಲಿ ಮುಂದುವರಿದ ಭಾಗವಾಗಿ ಹೊರ ಬಂದಿದೆ.
ಎಲ್ಲಿಂದ ಬರ್ತಿರೋ ನೀವೆಲ್ಲಾ ಮೊದಲನೆ ಎಪಿಸೋಡ್ ನೋಡಿದವರಿಗೆ ಆ ನಾಲ್ಕು ಜನರಲ್ಲಿ ಯಾರನ್ನ ನಂಬೋದು? ಕಾರ್ತಿ ಜೀವನದಲ್ಲಿ ಪ್ರತೀಕ್ ಬೆನ್ನ ಹಿಂದೆ ಚುಚ್ಚೊ ಕಟ್ಟಪ್ಪ ಆಗಿದ್ದು ನಿಜಾನ? ಆ ಗುಲಾಬಿ ಲೆಗ್ಗಿಂಗ್ಸ್ ರಹಸ್ಯ ಏನು? ಮುಂತಾದ ಪ್ರಶ್ನೆಗಳು ಎದ್ದಿರಬಹುದು. ಅವೆಲ್ಲಕ್ಕೂ ಉತ್ತರ ಎಪಿಸೋಡ್ ಎರಡರಲ್ಲಿದೆ. ಎಪಿಸೋಡ್ ಒಂದನ್ನು ನೋಡಿ ಆನಂದಿಸಿದವರು ಎರಡನೇ ಎಪಿಸೋಡ್ ಅನ್ನೂ ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸ ಚಿತ್ರ ತಂಡಕ್ಕಿದೆ.
ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ & ಭಾಗ್ಯರತ್ನ ಪಿಕ್ಚರ್ಸ್ ಅರ್ಪಿಸುವ, ಹೇಮಂತ್ ಯುಬಿಸಿ ಬರೆದು, ನಿರ್ದೇಶಿಸಿರುವ ಎಲ್ಲಿಂದ ಬರ್ತಿರೋ ನೀವೆಲ್ಲ ಕಿರುಚಿತ್ರದ ಎರಡನೇ ಎಪಿಸೋಡ್ ಯೂಟ್ಯೂಬ್ ನಲ್ಲಿ ಮೇ 13 ರಂದು ರಿಲೀಸ್ ಆಗಿದ್ದು, ಅದಾಗಲೇ 625,991 ವೀಕ್ಷಣೆಗಳನ್ನು ಪಡೆದಿದೆ.
ಸರ್ವನ್, ಪ್ರತೀಕ್, ಸ್ಪೂರ್ತಿ, ಗೌರವ್ ಮೊದಲಾದವರ ತಾರಾಗಣ ಹೊಂದಿದ ಈ ಕಿರುಚಿತ್ರವನ್ನು ಸಂದೀಪ್ ದಾಸ್, ಗುರು ಕೆ.ಪಿ, ಮಂಜುನಾಥ್ ಯುಬಿಸಿ, ಪುರುಷೋತ್ತಮ್ ಬಿಎಸ್ ಮುಂತಾದವರು ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಕಣ್ಣನ್ ಛಾಯಾಗ್ರಹಣ, ಮಯೂರ್ ಅಂಬೆಕಲ್ಲು ಸಂಗೀತ ಮತ್ತು ಹಾಡು, ಅನಿರುದ್ದ್ ಭಟ್ ಸಂಕಲನ ಮತ್ತು ಸಾಹಿತ್ಯ ವಿಭಾಗದಲ್ಲಿ ದುಡಿದಿದ್ದಾರೆ.