ಮಡಿಕೇರಿ: ಐಸಿಎಐ ಯ ಎಸ್ ಐ ಆರ್ ಸಿ ಯ ಬೆಂಗಳೂರು ಶಾಖೆಯು ಮಂಗಳೂರು ಮತ್ತು ಉಡುಪಿ ಶಾಖೆಯೊಂದಿಗೆ ಜಂಟಿಯಾಗಿ ಸಿಎ ಮತ್ತು ಕುಟುಂಬದ ಸದಸ್ಯರುಗಳಿಗಾಗಿ 3 ದಿನಗಳ ರೆಸಿಡೆನ್ಶಿಯಲ್ ರಿಫ್ರೆಶ್ ಕೋರ್ಸ್ ಅನ್ನು ಆಯೋಜಿಸಿತ್ತು. ಕಾರ್ಯಕ್ರಮವು ಮೇ 6 ರಿಂದ 8 ವರೆಗೆ ಮಡಿಕೇರಿಯ ಪ್ಯಾಡಿಂಗ್ಟನ್ ರೆಸಾರ್ಟ್ನಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ಅಪ್ಪಚ್ಚು ರಂಜನ್, ಬೆಂಗಳೂರು ಶಾಖೆಯ ಅಧ್ಯಕ್ಷ ಸಿ.ಎ. ಶ್ರೀನಿವಾಸ ಟಿ, ಸಿಎ ಪ್ರಸನ್ನ ಶೆಣೈ, ಮಂಗಳೂರು ಶಾಖೆಯ ಅಧ್ಯಕ್ಷ, ಸಿಎ ಲೋಕೇಶ್ ಶೆಟ್ಟಿ, ಉಡುಪಿ ಶಾಖೆಯ ಅಧ್ಯಕ್ಷ ಮತ್ತು ಬೆಂಗಳೂರು ಮತ್ತು ಮಂಗಳೂರು ಶಾಖೆಗಳ ಆಡಳಿತ ಸಮಿತಿ ಸದಸ್ಯರು ಹಾಗೂ ಸಿಎ ಸದಸ್ಯರು ಉಪಸ್ಥಿತರಿದ್ದರು.