ಮಣಿಪಾಲ: ಇಂಟರ್ ನ್ಯಾಶನಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಕೊಲಾಬೋರೇಷನ್ ನಿರ್ದೇಶಕ ಮತ್ತು ಓರಲ್ ಪೆಥಾಲಜಿಯ ಪ್ರೊಫೆಸರ್ ಡಾ. ರಘು ರಾಧಾಕೃಷ್ಣನ್ ಅವರಿಗೆ ಯುಕೆಯ ಶೆಫೀಲ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷರು ಮತ್ತು ಉಪಕುಲಪತಿಗಳು, ಗೌರವ ಪ್ರಾಧ್ಯಾಪಕ ಬಿರುದು ನೀಡಿ ಗೌರವಿಸಿದ್ದಾರೆ.
“ಎಪಿಜೆನೆಟಿಕ್ ಕಾರ್ಯವಿಧಾನಗಳಿಂದ ಹಾಕ್ಸ್ ಜೀನ್ಗಳ ಎಪಿಥೇಲಿಯಲ್ ರಿಪ್ರೊಗ್ರಾಮಿಂಗ್ ಮತ್ತು ಬಾಯಿಯ ಕ್ಯಾನ್ಸರ್ಗೆ ಅದರ ಪರಿಣಾಮಗಳು” ಈ ಕೆಲಸಕ್ಕಾಗಿ ಪ್ರತಿಷ್ಠಿತ ವೆಲ್ಕಮ್ ಟ್ರಸ್ಟ್ ಡಿಬಿಟಿ ಇಂಡಿಯಾ ಅಲೈಯನ್ಸ್ ಫೆಲೋಶಿಪ್ ಗೂ ಕೂಡಾ ಡಾ. ರಘು ಭಾಜನರಾಗಿದ್ದಾರೆ. ವೆಲ್ಕಮ್ ಟ್ರಸ್ಟ್ ಡಿಬಿಟಿ ಐಎ ಫೆಲೋಶಿಪ್ ಪಡೆದ ಮೊದಲ ದಂತ ವೈದ್ಯ ಎನ್ನುವ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯು 5 ವರ್ಷಗಳವರೆಗೆ 3.55 ಕೋಟಿ ರೂಪಾಯಿಗಳನ್ನು ಒಳಗೊಂಡಿರುತ್ತದೆ.
ಮಾಹೆಯ ಪ್ರೊ ಚಾನ್ಸೆಲರ್ ಎಚ್. ಎಸ್ ಬಲ್ಲಾಳ್ ಮತ್ತು ವೈಸ್ ಚಾನ್ಸೆಲರ್ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಡಾ.ರಘು ರಾಧಾಕೃಷ್ಣನ್ ಅವರ ಸಾಧನೆಗಾಗಿ ಅವರನ್ನು ಅಭಿನಂದಿಸಿದ್ದಾರೆ.