ಕಾರ್ಕಳ: ಕಾರ್ಕಳದ ಜೋಡುರಸ್ತೆಯ ಪ್ರೈಮ್ ಮಾಲ್ ನ 2 ನೇ ಮಹಡಿಯಲ್ಲಿ ಅತಿ ಶೀಘ್ರದಲ್ಲಿ ಆರಂಭಗೊಳ್ಳಲಿರುವ ಪೂರ್ಣಿಮಾ ಲೈಫ್ ಸ್ಟೈಲ್ ನಲ್ಲಿ ಫೆ. 21ರಂದು ಲಕ್ಷ್ಮಿ ಪೂಜೆ ನಡೆಯಿತು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಮಾಲ್ ಗೆ ಭೇಟಿ ನೀಡಿ ಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡರು.
ಮಾ.10 ರಂದು ಪೂರ್ಣಿಮಾ ಲೈಫ್ ಸ್ಟೈಲ್ ಶುಭಾರಂಭ:
ವಿದ್ಯುಕ್ತವಾಗಿ ಮಾ.10 ರಂದು ಪ್ರೈಮ್ ಮಾಲ್ ನಲ್ಲಿ ಪೂರ್ಣಿಮಾ ಲೈಫ್ ಸ್ಟೈಲ್ ಶುಭಾರಂಭಗೊಳ್ಳಲಿದೆ.
ಶುಭಾರಂಭಕ್ಕೆ ಸಚಿವ ವಿ.ಸುನಿಲ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೆಂದ್ರ ಹೆಗ್ಗಡೆ, ತುಳು ಚಿತ್ರ ನಟ ಅರವಿಂದ್ ಬೋಳಾರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿರುವರು.
ನೂತನ ಮಳಿಗೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮೆನ್ಸ್ ವಿಮೆನ್ಸ್ ಎತ್ನಿಕ್ ವೇರ್ ನೊಂದಿಗೆ ಫುಡ್ ಕೋರ್ಟ್, ಚೈನೀಸ್, ನಾರ್ತ್ ಇಂಡಿಯನ್ ಪ್ಯೂರ್ ವೆಜಿಟೇರಿಯನ್ ಫುಡ್ ಕೋರ್ಟ್, ಪಾಶ್ಪೆಟಿಕ್ ವಿಭಾಗ ಹಾಗೂ ಇನ್ನಿತರ ಮಳಿಗೆಗಳು 8 ಸಾವಿರ ಚದರ ಅಡಿಯಲ್ಲಿ ಒಂದೇ ಸೂರಿನಡಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಪಾಲುದಾರರಾದ ರವಿ ಪ್ರಕಾಶ್ ಪ್ರಭು, ಕಿರಣ್ ರವಿ ಪ್ರಕಾಶ್ ಹಾಗೂ ಪ್ರಜ್ವಲ್ ಪ್ರಭು ಅವರು ತಿಳಿಸಿದ್ದಾರೆ.












