ಉಡುಪಿ: ಬಜರಂಗ ದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕ್ ರಘು ಸಕಲೇಶಪುರ ಅವರಿಗೆ ರಾಜ್ಯ ಸರಕಾರ ಗಡಿಪಾರು ಆದೇಶ ಹೊರಡಿಸಿರುವುದು ಖಂಡನೀಯ ಎಂದು ಬಜರಂಗ ದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್. ತಿಳಿಸಿದ್ದಾರೆ.
ಚುನಾವಣೆ ಸಂದರ್ಭ ನಮ್ಮ ಸಂಘಟನೆಯ ಕಾರ್ಯಕರ್ತರು ದೇಶದ ರಕ್ಷಣೆಗಾಗಿ ತಮ್ಮ ಸೇವೆಯಲ್ಲಿ ತೊಡಗಿದ್ದಾರೆ. ಭಾರತವನ್ನು ಜಗದ್ಗುರು ಮಾಡುವ ನಾಯಕತ್ವಕ್ಕೆ ಬೆಂಬಲ ಕೊಡುತ್ತಾ, ರಾಷ್ಟ್ರೀಯತೇ ಮತ್ತು ಧರ್ಮ ವನ್ನು ಕಾಯುವ ನಾಯಕತ್ವ ವನ್ನು ಬೆಂಬಲಿಸುವ ಕಾರ್ಯವನ್ನು ಬಜರಂಗದ ಕಾರ್ಯಕರ್ತರು ಮಾಡುತ್ತಿದ್ದಾರೆ. ಆದರೆ ಇದನ್ನು ಅರಗಿಸಿಕೊಳ್ಳಲಾಗದ ದುಷ್ಟ ಶಕ್ತಿ ಗಳು ಗಡೀಪಾರು ಹಾಗೂ ಗೂಂಡಾ ಕಾಯ್ದೆ ಯಂತಹ ಕೇಸುಗಳನ್ನು ನಮ್ಮ ಕಾರ್ಯಕರ್ತರ ಮೇಲೆ ಹಾಕಿದ್ದಾರೆ. ಅದಲ್ಲದೆ ಸುಮಾರು ಅಲ್ಪಸಂಖ್ಯಾತ ರ ಮೇಲೆ ಇರುವಂಥ ಕೇಸ್ ಗಳನ್ನು ಹಿಂದೆ ತೆಗೆಂದುಕೊಂಡಿದ್ದಾರೆ ಇದನ್ನು ಸಂಘಟನೆ ಉಗ್ರವಾಗಿ ಖಂಡಿಸುತ್ತದೆ. ಹಾಗೂ ಸಂಘಟನೆ ಇದಕ್ಕೆ ಸೂಕ್ತವಾದ ಸಮಯದಲ್ಲಿ ಸರಿಯಾದ ಉತ್ತರ ನೀಡಲಿದೆ. ಹಿಂದೂ ಸಮಾಜ ಇದನ್ನು ಸರಿಯಾಗಿ ಗಮನಿಸಬೇಕು. ನಮ್ಮ ಸಂಘಟನೆಯ ಯಾವುದೇ ಕಾರ್ಯಕರ್ತ ಇಟ್ಟ ಹೆಜ್ಜೆ ಹಿಂದಿಡುವವರು ಅಲ್ಲ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ್ ಸುನಿಲ್ ಕೆ. ಆರ್. ಹಾಗೂ ಸಹ ಸಂಚಾಲಕ ಮುರಳಿ ಕೃಷ್ಣ ಹಸಂತ್ತಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.