ಫೆಬ್ರವರಿ 11ರ, 11 ಗಂಟೆ 11 ನಿಮಿಷಕ್ಕಾಗಿ ಕಾಯ್ತಾ ಇರಿ!

ಫೆಬ್ರವರಿ 11 ರಂದು, 11 ಗಂಟೆ 11 ನಿಮಿಷಕ್ಕಾಗಿ ಕಾಯ್ತಾ ಇರಿ! ಹೀಗೊಂದು ಸಂದೇಶ ಬಂದಿದ್ದು ಜೇಮ್ಸ್ ಚಿತ್ರತಂಡದ ಕಡೆಯಿಂದ. ಯಸ್. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಫ್ಯಾನ್ಸ್​​ಗಳಿಗೆ ಶೀಘ್ರದಲ್ಲೇ  ‘ಜೇಮ್ಸ್’ ಚಿತ್ರತಂಡ ಗಿಫ್ಟ್ ಕೊಡಲು ರೆಡಿಯಾಗಿದೆ.

ಪ್ರತಿಕ್ಷಣ ‘ಜೇಮ್ಸ್​’ ಚಿತ್ರದ ಅಪ್ಡೇಟ್​ಗಳ ಬಗ್ಗೆ ಕಾಯುತ್ತುರುವ ಅಪ್ಪು ಫ್ಯಾನ್ಸ್​ಗಳಿಗೆ ನಿರಾಸೆ ಮಾಡಬಾರದು ಅಂತ ಜೇಮ್ಸ್ ಚಿತ್ರತಂಡ ನಿರ್ಧರಿಸಿದ್ದು, ಜೇಮ್ಸ್ ಚಿತ್ರದ ಟೀಸರ್, ಟ್ರೈಲರ್ ಏನನ್ನು ಲಾಂಚ್ ಮಾಡದೇ ನೇರವಾಗಿ ಚಿತ್ರವನ್ನು ಥಿಯೇಟರ್​​ನಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಅನ್ನೊ ಸುದ್ದಿ ಸದ್ದು ಮಾಡಿತ್ತು. ಈ ಸುದ್ದಿ ಕೇಳಿ ಅಪ್ಪು ಫ್ಯಾನ್ಸ್​ಗಳಿಗೆ ನಿರಾಶೆಯಾಗಿತ್ತು. ಆದರೆ, ಈಗ ಪವರ್ ಸ್ಟಾರ್  ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು,  ಫೆಬ್ರವರಿ 11ರಂದು, 11 ಗಂಟೆ 11 ನಿಮಿಷಕ್ಕೆ  ‘ಜೇಮ್ಸ್’ ಚಿತ್ರದ ಟೀಸರ್ ಲಾಂಚ್ ಮಾಡಲು ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಭರ್ಜರಿ ರೆಡಿಯಾಗಿದ್ದಾರೆ. ಜೊತೆಗೆ ಪುನೀತ್ ಅಭಿಮಾನಿಗಳು ಕೂಡ ಚಿತ್ರಕ್ಕಾಗಿ ಫುಲ್ ಕಣ್ಣು ಬಿಟ್ಟು ರೆಡಿಯಾಗಿದ್ದಾರೆ.