ಕುರ್ಕಾಲು: ಗ್ರಾಮ ಒನ್ ಕೇಂದ್ರ ಉದ್ಘಾಟನೆ

ಕುರ್ಕಾಲು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಕೇಂದ್ರವು ಕುರ್ಕಾಲು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಶಂಕರಪುರದಲ್ಲಿ ಇಂದು ಉದ್ಘಾಟನೆಗೊಂಡಿತು.

750 ಕ್ಕೂ ಹೆಚ್ಚಿನ ಸರ್ಕಾರಿ ಸೇವೆಗಳನ್ನು ಒಳಗೊಂಡ ಗ್ರಾಮ ಒನ್ ಕೇಂದ್ರ ಇದಾಗಿದ್ದು, ಆಧಾರ್ , ಇ-ಸ್ಟಾಂಪ್ ಹಾಗೂ ಸೇವಾ ಸಿಂಧುವಿನ ಎಲ್ಲಾ ಸೇವೆಗಳನ್ನು ಗ್ರಾಮೀಣ ಭಾಗದ ನಾಗರಿಕರಿಗೆ ಹಲವು ಸೇವೆಗಳನ್ನು ಒದಗಿಸುವ ಸೇವಾ ವೇದಿಕೆಯಾಗಿದೆ. ರಾಜೇಶ್ ನಾಯ್ಕ್ ಇದರ ವ್ಯವಸ್ಥಾಪಕರಾಗಿದ್ದಾರೆ.

ಕಾರ್ಯಕ್ರಮವನ್ನು ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷರು ಮಹೇಶ್ ಶೆಟ್ಟಿ ಉದ್ಘಾಟಿಸಿದರು. ಗುರೂಜಿ ಸಾಯಿ ಈಶ್ವರ್, ಧರ್ಮದರ್ಶಿಗಳು, ಶ್ರೀ ದ್ವಾರಕಮಯಿ ಶ್ರೀ ಸಾಯಿಬಾಬ ಮಂದಿರ ಶಂಕರಪುರ ಇವರು ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಕ್ಲೆರೆನ್ಸ್ ಕಾರ್ನೆಲಿಯೊ ಗ್ರಾಮ ಲೆಕ್ಕಾಧಿಕಾರಿ ಕುರ್ಕಾಲು ಗ್ರಾಮ ಪಂಚಾಯಿತ್, ಮೊಹಮ್ಮದ್ ಫಾರೂಕ್ ಚಂದ್ರನಗರ, ಸಮಾಜ ಸೇವಕರು, ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತರು, ದಿವಾಕರ್ ಬಿ ಶೆಟ್ಟಿ, ಸಮಾಜ ಸೇವಕರು, ರಾಷ್ಟ್ರೀಯ ಪ್ರಶಸ್ತಿ ವಿಜೇತರು, ಅಮರನಾಥ್ ಬಿ ಶೆಟ್ಟಿ ಐರೋಳಿ ನವ ಮುಂಬೈ, ರವಿರಾಜ್ ಸಾಲ್ಯಾನ್ ಮಲ್ಪೆ, ಹಿರಿಯ ವಿ.ಎಲ್.ಇ ಉಡುಪಿ, ಆರ್.ಕೆ. ಮೆಂಡನ್ ಮಲ್ಪೆ ಮತ್ತು ವಿನೇಶ್ ನಾಯ್ಕ್, ಚೈತ್ರಾ ಮತ್ತು ನಿಶಾ ಉಪಸ್ಥಿತರಿದ್ದರು.